ಕಡಿಮೆ ದರ ಪ್ರಯಾಣದ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್, ಇಂಧನ ತೆರಿಗೆಯಲ್ಲಿ 400 ರೂಪಾಯಿ ಹೆಚ್ಚಳ ಘೋಷಿಸಿದ್ದರಿಂದ ಪ್ರಯಾಣ ದರದಲ್ಲಿ 400 ರೂಪಾಯಿಗಳ ಏರಿಕೆಯಾಗಲಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ.
ಈಗಾಗಲೇ ಜೆಟ್‌ಏರ್‌ವೇಸ್, ಕಿಂಗ್‌ಫಿಶರ್ ಏರ್‌ಲೈನ್ಸ್ ಸೇರಿದಂತೆ ಕೆಲ ವಿಮಾನಯಾನ ಸಂಸ್ಥೆಗಳು ಪ್ರಯಾಣ ದರಗಳಲ್ಲಿ ಏರಿಕೆ ಘೋಷಿಸಿವೆ.
ವಿಮಾನಗಳ ಇಂಧನ ತೆರಿಗೆಯಲ್ಲಿ 400 ರೂಪಾಯಿ ಹೆಚ್ಚಳ ಘೋಷಿಸಲಾಗಿದ್ದು, ಇಂದಿನಿಂದ ಜಾರಿಗೆ ಬರಲಿದೆ ಎಂದು ಸ್ಪೈಸ್ ಜೆಟ್ ಕಾರ್ಯಾಚರಣೆ ಮುಖ್ಯಸ್ಥೆ ಸಂಯುಕ್ತ ಶ್ರೀಧರನ್ ಮುಂಬೈಯಲ್ಲಿ ತಿಳಿಸಿದ್ದಾರೆ.
ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ವಿಮಾನಯಾನ ಇಂಧನ ದರವನ್ನು ಶೇ.12 ರಷ್ಟು ಏರಿಕೆ ಮಾಡಿದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಇಂಧನ ತೆರಿಗೆಯಲ್ಲಿ 400 ರೂಪಾಯಿ ಹೆಚ್ಚಳ ಘೋಷಿಸಿವೆ ಎಂದು ವಿಮಾನಯಾನ ಸಂಸ್ಥೆ ಮೂಲಗಳು ತಿಳಿಸಿವೆ.
ಜೆಟ್‌ಏರ್‌ವೇಸ್, ಕಿಂಗ್‌ಫಿಶರ್ ಏರ್‌ಲೈನ್ಸ್ ಸೇರಿದಂತೆ ಕೆಲ ವಿಮಾನಯಾನ ಸಂಸ್ಥೆಗಳು ಮಂಗಳವಾರದಿಂದ ಪ್ರಯಾಣ ದರದಲ್ಲಿ 400 ರೂಪಾಯಿ ಹೆಚ್ಚಳ ಘೋಷಿಸಿವೆ. |