ಜಗತ್ತು ಆರ್ಥಿಕ ಕುಸಿತದಿಂದ ಬಳಲಿ ಬೆಂಡಾಗಿದ್ದರೂ ಭಾರತ ಮಾತ್ರ ಮತ್ತೊಂದು ಆರ್ಥಿಕ ದಾಖಲೆಯತ್ತ ಸಾಗಿದೆ.ದೇಶದಲ್ಲಿರುವ ಬ್ಯಾಂಕಿಂಗ್ ವಹಿವಾಟು ಕೇವಲ ಲಾಭದಾಯಕ ಮಾತ್ರವಲ್ಲ. ಆರ್ಥಿಕ ಸಂಗ್ರಹಣೆಯಲ್ಲಿ ಇತರ ಎಲ್ಲ ಕ್ಷೇತ್ರಗಳನ್ನು ಹಿಂದಕ್ಕೆ ತಳ್ಳಿ ಮುಂದಕ್ಕೆ ಸಾಗಿದೆ. ಭಾರತದ ಕಾರ್ಪೋರೇಟ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮೊದಲ ತ್ರೈಮಾಸಿಕ ನೇರ ತೆರಿಗೆ ಪಾವತಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್‌ನ್ನು (ಒಎನ್‌ಜಿಸಿ ) ಹಿಂದಕ್ಕೆ ತಳ್ಳಿ ಅತಿ ಹೆಚ್ಚು ತೆರಿಗೆ ಪಾವತಿಸುವ ಬ್ಯಾಂಕ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಗಡ ತೆರಿಗೆ ಪಾವತಿ ಅಂಕಿ ಅಂಶಗಳ ಪ್ರಕಾರ 2009 ಏಪ್ರಿಲ್ - ಜೂನ್‌ನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಭದಲ್ಲಿ ದಾಖಲೆ ಸ್ಥಾಪಿಸಿ 1,068 ಕೋಟಿ ರೂಪಾಯಿಗಳ ತೆರಿಗೆಯನ್ನು ಪಾವತಿಸಿದ್ದು, ಒಎನ್‌ಜಿಸಿ 890 ಕೋಟಿ ರೂಪಾಯಿಗಳ ತೆರಿಗೆಯನ್ನು ಪಾವತಿಸಿ ಎರಡನೇ ಸ್ಥಾನದಲ್ಲಿದೆ.ಕಳೆದ ವರ್ಷದ ಅವಧಿಯಲ್ಲಿ ಜಿಡಿಪಿ ದರ ಶೇ. 9 ರಷ್ಟಿದ್ದಾಗ 663 ಕೋಟಿ ರೂಪಾಯಿಗಳ ತೆರಿಗೆಯನ್ನು ಪಾವತಿಸಿದ್ದ ಎಸ್‌ಬಿಐ ಬ್ಯಾಂಕ್ , ಪ್ರಸಕ್ತ ವರ್ಷದ ಲಾಭದಲ್ಲಿ ಶೇ.61 ರಷ್ಟು ಏರಿಕೆಯಾಗಿ 1,068 ಕೋಟಿ ರೂಪಾಯಿ ತೆರಿಗೆ ಪಾವತಿಸಿದೆ.ಕಳೆದ ವರ್ಷದ ಅವಧಿಯಲ್ಲಿ 1,333ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದ ಒಎನ್‌ಜಿಸಿ ,ಪ್ರಸಕ್ತ ವರ್ಷದ ಲಾಭದಲ್ಲಿ ಶೇ.33 ರಷ್ಟು ಕುಸಿತವಾಗಿ 890 ಕೋಟಿ ರೂಪಾಯಿ ತೆರಿಗೆ ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಪ್ರಮುಖ 25 ಕಂಪೆನಿಗಳಲ್ಲಿ 11 ಕಂಪೆನಿಗಳು ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದವುಗಳಾಗಿದ್ದು,ಏಪ್ರಿಲ್-ಜೂನ್ 2009ರ ಅವಧಿಯಲ್ಲಿ ತಲಾ 100 ಕೋಟಿ ರೂಪಾಯಿಗಳಿಂದ 1ಸಾವಿರ ಕೋಟಿ ರೂಪಾಯಿಗಳವರೆಗೆ ತೆರಿಗೆಯನ್ನು ಪಾವತಿಸಿವೆಎಸ್ಬಿಐ , ಐಸಿಐಸಿಐ ಬ್ಯಾಂಕ್ ,ಎಚ್‌ಡಿಎಫ್‌ಸಿ ಬ್ಯಾಂಕ್ ,ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ,ಪಿಎನ್‌ಬಿ , ಬ್ಯಾಂಕ್ ಆಫ್ ಇಂಡಿಯಾ ,ಎಚ್‌ಎಸ್‌ಬಿಸಿ , ಬ್ಯಾಂಕ್ ಆಫ್ ಬರೋಡಾ ಸಿಟಿಬ್ಯಾಂಕ್ ,ಎಚ್‌ಡಿಎಫ್‌ಸಿ ಲಿಮಿಟೆಡ್ ಮತ್ತು ನಬಾರ್ಡ್ ಬ್ಯಾಂಕ್‌ಗಳು ಅತಿ ಹೆಚ್ಚು ತೆರಿಗೆ ಪಾವತಿಸಿದ ಉನ್ನತ 11 ಬ್ಯಾಂಕ್‌ಗಳಲ್ಲಿ ಸ್ಥಾನ ಪಡೆದಿವೆ. |