ಏಷ್ಯಾ ಮಾರುಕಟ್ಟೆಗಳ ಪ್ರಬಲ ವಹಿವಾಟಿನಿಂದಾಗಿ ದೇಶಿಯ ಶೇರುಪೇಟೆ ಚೇತರಿಕೆಯಾಗಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 3 ಪೈಸೆ ಏರಿಕೆ ಕಂಡಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್‌ಗೆ 48.19 ರೂಪಾಯಿಗಳಿಗೆ ತಲುಪಿತ್ತು. ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 3 ಪೈಸೆ ಕುಸಿತ ಕಂಡು 48.16 ರೂಪಾಯಿಗಳಿಗೆ ತಲುಪಿದೆ. ಏಷ್ಯಾ ಮಾರುಕಟ್ಟೆಗಳ ಪ್ರಬಲ ವಹಿವಾಟಿನಿಂದಾಗಿ ದೇಶಿಯ ಶೇರುಪೇಟೆ ಚೇತರಿಕೆಯಾಗಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
ಹಣದುಬ್ಬರ ಋಣಾತ್ಮಕ ವಲಯವನ್ನು ಪ್ರವೇಶಿಸಿದ ನಂತರ ಬಿಎಸ್‌ಇ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 257.31 ಪಾಯಿಂಟ್‌ಗಳ ಕುಸಿತ ಕಂಡು 14,265.53 ಅಂಕಗಳಿಗೆ ತಲುಪಿದೆ. |