ಸಾರ್ವಜನಿಕ ಸ್ವಾಮ್ಯದ ಎಸ್‌ಬಿಐ ಬ್ಯಾಂಕ್‌ನ ಮುಖ್ಯಸ್ಥರ ವೇತನದಲ್ಲಿ ಕಳೆದ ವರ್ಷದಲ್ಲಿ ಕೇವಲ ಶೇ.25 ರಷ್ಟು ಹೆಚ್ಚಳ ಮಾಡಲಾಗಿದ್ದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ,ಬ್ಯಾಂಕ್‌ನ ನಿರ್ದೇಶಕರಿಗಿಂತ ಲೆಕ್ಕಪರಿಶೋಧಕರಿಗೆ 100 ಪಟ್ಟು ಹೆಚ್ಚಿನ ಸಂಬಳವನ್ನು ನೀಡುತ್ತದೆ. ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ಕಳೆದ 2007-08ರ ಆರ್ಥಿಕ ಸಾಲಿನಲ್ಲಿ ವೇತನ ಮತ್ತು ಇತರ ಭತ್ಯೆಗಳು ಸೇರಿ ಒಟ್ಟು ವಾರ್ಷಿಕವಾಗಿ 16.2 ಲಕ್ಷ ರೂ.ಗಳ ವೇತನ ಪಡೆಯುತ್ತಿದ್ದರು. ನಂತರ 2008-09ರ ಆರ್ಥಿಕ ಸಾಲಿನಲ್ಲಿ 20 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿತ್ತು ಎಂದು ಬ್ಯಾಂಕ್‌ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಲಾಗಿದೆ.2009 ರ ಮಾರ್ಚ್ 31ಕ್ಕೆ ವರ್ಷಾಂತ್ಯಗೊಂಡಂತೆ ಬ್ಯಾಂಕ್‌ನ ಲಾಭ ಮತ್ತು ನಷ್ಟದ ವರದಿಯಲ್ಲಿ ಬ್ಯಾಂಕ್‌ನ ನಿರ್ದೇಶಕರ ಶುಲ್ಕ ,ಭತ್ಯೆ ಮತ್ತು ವೆಚ್ಚಗಳನ್ನು ಸೇರಿ 99.81 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ತಿಳಿಸಲಾಗಿದೆಇದೇ ಸಮಯದಲ್ಲಿ ಶಾಖಾ ಬ್ಯಾಂಕ್‌ಗಳ ಲೆಕ್ಕಪರಿಶೋಧಕರು ಮತ್ತು ಕೇಂದ್ರ ಲೆಕ್ಕ ಪರಿಶೋಧಕರ ಶುಲ್ಕ ಮತ್ತು ವೆಚ್ಚ ಸೇರಿ 103.7 ಕೋಟಿ ರೂಪಾಯಿ ಪಾವತಿಸಲಾಗಿದೆ. ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 97.3 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿತ್ತು. ಆದರೆ ನಿರ್ದೇಶಕರ ಶುಲ್ಕ ಮತ್ತು ವೆಚ್ಚ ಸೇರಿ 12 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿತ್ತು ಕ್ರೂಢೀಕೃತ ಮೂಲದ ಪ್ರಕಾರ, 2008-09ರ ಆರ್ಥಿಕ ಸಾಲಿನಲ್ಲಿ ನಿರ್ದೇಶಕರರು ಮತ್ತು ಲೆಕ್ಕಪರಿಶೋಧಕರ ಶುಲ್ಕ ಹಾಗೂ ವೆಚ್ಚದ ಮಿತಿಯನ್ನು ಬ್ಯಾಂಕ್ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ. ನಿರ್ದೇಶಕರ ಶುಲ್ಕ ಮತ್ತು ಭತ್ಯೆ ಹಾಗೂ ವೆಚ್ಚ ಸೇರಿದಂತೆ 5.3 ಕೋಟಿ ರೂಪಾಯಿಗಳಿಂದ 5.6 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಲೆಕ್ಕಪರಿಶೋಧಕರ ಶುಲ್ಕ,ವೆಚ್ಚ ಮತ್ತು ಭತ್ಯೆಗಳನ್ನು 157.9 ಕೋಟಿ ರೂಪಾಯಿಗಳಿಂದ 162.25 ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ಹಲವು ವಲಯಗಳು ಸೇರಿದಂತೆ 14 ಪ್ರಮುಖ ಲೆಕ್ಕಪರಿಶೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. |