2004-07ರ ವರೆಗಿನ ಅವಧಿಯಲ್ಲಿ ಭಾರತೀಯ ಕೈಗಾರಿಕೋದ್ಯಮ ಅಮೆರಿಕದಲ್ಲಿ 105 ಬಿಲಿಯನ್ ಡಾಲರ್ ಹೂಡಿಕೆ ಮಾಡಿ 3 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.
ಇದರಿಂದಾಗಿ ಭಾರತ ಮತ್ತು ಅಮೆರಿಕ ನಡುವಣ ಎರುತ್ತಿರುವ ವಹಿವಾಟು , ಹೂಡಿಕೆಯಿಂದಾಗಿ ಮುಂಬರುವ ದಿನಗಳ ಕುರಿತಂತೆ ಆಶಾಭಾವನೆ ಮೂಡಿಸುತ್ತದೆ ಎಂದು ಸಚಿವ ಶರ್ಮಾ ಇಂಡೋ-ಅಮೆರಿಕ ಬಿಜಿನೆಸ್ ಕೌನ್ಸಿಲ್‌ನ ಸೈನರ್ಜಿಸ್ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದರು.
ಅಮೆರಿಕ ಹಾಗೂ ಭಾರತದ ಕಾರ್ಪೋರೇಟ್ ಕಂಪೆನಿಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಶರ್ಮಾ , ಭಾರತದಲ್ಲಿರುವ ಆರ್ಥಿಕ ಸ್ವಾತಂತ್ಯದಿಂದಾಗಿ ಅಮೆರಿಕದಲ್ಲಿ ಹೆಚ್ಚಿನ ವಹಿವಾಟು ಹಾಗೂ ಹೂಡಿಕೆ ಮಾಡಲು ಸಾಧ್ಯವಾಗಿದೆ ಎಂದು ನುಡಿದರು.
ಅಮೆರಿಕದ ಆರ್ಥಿಕತೆಯಲ್ಲಿ ಭಾರತದ ಕೈಗಾರಿಕೋದ್ಯಮದ ಪಾತ್ರ ಕುರಿತಂತೆ ಇಂಡಿಯಾ ಬ್ರಾಂಡ್ ಈಕ್ವಿಟಿ ಫೌಂಡೇಶನ್ ಇತ್ತೀಚೆಗೆ ಪ್ರಕಟಿಸಿದ ಅದ್ಯಯನದ ವರದಿಯನ್ನು ಬಿಡುಗಡೆ ಮಾಡಿದ ಅವರು 2004-07ರ ಅವಧಿಯಲ್ಲಿ ಭಾರತ ಅಮೆರಿಕದಲ್ಲಿ 105 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು,3 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕ ವಹಿವಾಟು ಪಾಲುದಾರ ದೇಶಗಳಾಗಿದ್ದು, ಮುಂಬರುವ 21 ಶತಮಾನದಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ. |