ಮಾಧ್ಯಮ ವಹಿವಾಟಿನ ಜೀ ನ್ಯೂಸ್ ಸಂಸ್ಥೆ . ಮಾರ್ಚ್ 31ಕ್ಕೆ ವರ್ಷಾಂತ್ಯಗೊಂಡಂತೆ ಆರ್ಥಿಕ ಸಾಲಿನಲ್ಲಿ ಕ್ರೂಢೀಕೃತ ನಿವ್ವಳ ಲಾಭದಲ್ಲಿ ಶೇ.20 ರಷ್ಟು ಏರಿಕೆಯಾಗಿ 44.56 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಅವಧಿಯಲ್ಲಿ ಕ್ರೂಢೀಕೃತ ನಿವ್ವಳ ಲಾಭ 37.07 ಕೋಟಿ ರೂಪಾಯಿಗಳಾಗಿತ್ತು ಎಂದು ಜೀ ನ್ಯೂಸ್ ಸಂಸ್ಥೆ ಮುಂಬೈ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಮಾಧ್ಯಮ ವಹಿವಾಟಿನ ಜೀ ನ್ಯೂಸ್ ಚಾನೆಲ್ , 2008-09ರ ಆರ್ಥಿಕ ಸಾಲಿನಲ್ಲಿ ತನ್ನ ಶೇರುದಾರರಿಗೆ ಪ್ರತಿ ಶೇರಿಗೆ 0.40 ರೂಪಾಯಿಗಳ ಡೆವಿಡೆಂಡ್ ಘೋಷಿಸಿದೆ
ಕಳೆದ ವರ್ಷಧ ಆರ್ಥಿಕ ಸಾಲಿನಲ್ಲಿ 37.30 ಕೋಟಿ ರೂಪಾಯಿ ಕ್ರೂಢೀಕೃತ ನಿವ್ವಳ ಲಾಭಗಳಿಸಿತ್ತು.ಪ್ರ2008-09ರ ಆರ್ಥಿಕ ಸಾಲಿನಲ್ಲಿ ಶೇ.19.46 ರಷ್ಟು ನಿವ್ವಳ ಲಾಭದಲ್ಲಿ ಏರಿಕೆಯಾಗಿ 44.56 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಸಮಯದಲ್ಲಿ ಜಾಗತಿಕ ಆರ್ಥಿಕತೆ ಬಿಕ್ಕಟ್ಟು ಎದುರಾಗಿದ್ದರೂ ಲಾಭದತ್ತ ಸಾಗಿದ್ದೇವೆ ಎಂದು ಜೀ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕ ನರೈನ್ ಗೋಯಲ್ ಹೇಳಿದ್ದಾರೆ.
ಮುಂಬೈ ಶೇರುಪೇಟೆಯಲ್ಲಿ ಜೀ ನ್ಯೂಸ್ ಶೇರುಗಳು ಶೇ.4 ರಷ್ಟು ಕುಸಿತ ಕಂಡು 39.20 ರೂಪಾಯಿಗಳಿಗೆ ತಲುಪಿದೆ. |