ದೇಶದ ಟೆಲಿಕಾಂ ಕಂಪೆನಿಗಳು ಗ್ರಾಮೀಣ ಕ್ಷೇತ್ರಗಳತ್ತ ಹೆಚ್ಚು ಗಮನಹರಿಸುತ್ತಿದ್ದು, ಮುಂಬರುವ 2013ರ ವೇಳೆಗೆ ಮೊಬೈಲ್ ಗ್ರಾಹಕರ ಸಂಖ್ಯೆ 771 ಮಿಲಿಯನ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಅಧ್ಯಯನದ ವರದಿಯಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ದೇಶದಲ್ಲಿ 452 ಮಿಲಿಯನ್ ಮೊಬೈಲ್ ಗ್ರಾಹಕರಿದ್ದು ವಾರ್ಷಿಕವಾಗಿ ಶೇ.14.3 ರಷ್ಟು ಏರಿಕೆ ಕಂಡು ಮುಂಬರುವ 2013ರ ವೇಳೆಗೆ 771 ಮಿಲಿಯನ್ ಗ್ರಾಹಕರನ್ನು ಭಾರತ ಹೊಂದಲಿದೆ ಎಂದು ಅಧ್ಯಯನ ಸಂಸ್ಥೆ ಗಾರ್ಟನರ್ ತಿಳಿಸಿದೆ.ಭಾರತದ ಮೊಬೈಲ್ ಉದ್ಯಮ ಮೊದಲಿನಷ್ಟು ವೇಗವಾಗಿ ಏರಿಕೆ ಕಾಣದಿದ್ದರೂ ಟೆಲಿಕಾಂ ಕಂಪೆನಿಗಳು ದೇಶದ ಗ್ರಾಮೀಣ ಕ್ಷೇತ್ರದತ್ತ ಗಮನಹರಿಸುವುದರಿಂದ ಮುಂದಿನ ಮೂರು ವರ್ಷಗಳವರೆಗೆ ಎರಡಂಕಿಯಲ್ಲಿ ಏರಿಕೆ ಮುಂದುವರಿಯಲಿದೆ ಎಂದು ಅಧ್ಯಯನ ಸಂಸ್ಥೆ ಗಾರ್ಟನರ್‌ನ ಹಿರಿಯ ಸಂಶೋಧನಾ ತಜ್ಞ ಮಧುಸೂಧನ್ ಗುಪ್ತಾ ಹೇಳಿದ್ದಾರೆ. ದೇಶದ ಮೊಬೈಲ್ ಮಾರುಕಟ್ಟೆ ಪ್ರಸ್ತುತ ಪಾಲು ಶೇ.38.7ರಷ್ಟಿದ್ದು, ಮುಂಬರುವ 2013ರ ವೇಳೆಗೆ ಶೇ.63.5 ರಷ್ಟಾಗಲಿದೆ ಎಂದು ಮೂಲಗಳು ತಿಳಿಸಿವೆ.ಟೆಲಿಕಾಂ ಕಂಪೆನಿಗಳು ದೇಶದ ಗ್ರಾಮೀಣ ಕ್ಷೇತ್ರದತ್ತ ಗಮನ ,ಎಲೆಕ್ಟ್ರಾನಿಕ್ ಉತ್ಪಾದಕ ಕಂಪೆನಿಗಳು ಕಡಿಮೆ ದರ ನಿಗದಿಪಡಿಸಿ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ದತೆ ನಡೆಸುತ್ತಿರುವುದರಿಂದ ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ಅಧ್ಯಯನ ಸಂಸ್ಥೆ ಗಾರ್ಟನರ್ ತಿಳಿಸಿದೆ. |