ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರ್‌ಇಂಡಿಯಾ ನೌಕರರಿಗೆ ವೇತನ ವಿತರಿಸಲು ಸಿಎಂಡಿ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ಇಂಡಿಯಾ ನೌಕರರಿಗೆ ವೇತನ ವಿತರಿಸಲು ಸಿಎಂಡಿ ಆದೇಶ
PTI
ಏರ್ ಇಂಡಿಯಾ ಸಿಬ್ಬಂದಿ ಜುಲೈ 31ರಿಂದ ಮುಷ್ಕರ ಆರಂಭಿಸುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಏರ್ಇಂಡಿಯಾ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು, ಸಿಬ್ಬಂದಿಗಳಿಗೆ ಕೂಡಲೇ ವೇತನ ನೀಡುವಂತೆ ಆದೇಶಿಸಿದ್ದಾರೆ. ‌

ಏರ್‌ ಇಂಡಿಯಾ ಅಡಳಿತ ಮಂಡಳಿ ಕಳೆದ ವಾರ ನೋಟಿಸ್ ಹೊರಡಿಸಿ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಿಬ್ಬಂದಿಗಳ ಜೂನ್ ತಿಂಗಳ ವೇತನವನ್ನು ಜುಲೈ 15ಕ್ಕೆ ನೀಡುವುದಾಗಿ ಘೋಷಿಸಿತ್ತು.

ಮಾಧ್ಯಮಗಳ ವರದಿಯ ಪ್ರಕಾರ ಏರ್ಇಂಡಿಯಾದ ಮುಖ್ಯ ವ್ಯವಸ್ಥಾಪಕರು, ನಿರ್ದೇಶಕರಿಗೆ ಹಾಗೂ ಹಿರಿಯ ಅಡಳಿತ ಮಂಡಳಿಗೆ ಆದೇಶ ಹೊರಡಿಸಿ ಕೂಡಲೇ ಸಿಬ್ಬಂದಿಗಳಿಗೆ ವೇತನವನ್ನು ನೀಡುವಂತೆ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಏರ್ ಇಂಡಿಯಾ ಅಡಳಿತ ಮಂಡಳಿ, ಸಿಬ್ಬಂದಿಗಳಿಗೆ 15 ದಿನಗಳ ವಿಳಂಬದ ನಂತರ ವೇತನ ಪಾವತಿಸುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೆ , ಹದಿನೈದು ದಿನಗಳಿಗಿಂತ ಹೆಚ್ಚಿನ ಅವಧಿಗೆ ವಿಳಂಬವಾದಲ್ಲಿ ಸಂಸ್ಥೆಯ 24 ಸಾವಿರ ಸಿಬ್ಬಂದಿ ಜೂನ್ 30 ರಂದು ಸಾಮೂಹಿಕ ಮುಷ್ಕರದಲ್ಲಿ ತೊಡಗುವುದಾಗಿ ಬೆದರಿಕೆ ಒಡ್ಡಿದ್ದರಿಂದ ವಿಮಾನ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆಗಳಿವೆ.

ಏರ್‌ಕಾರ್ಪೋರೇಶನ್ ಎಂಪ್ಲಾಯಿಸ್ ಯುನಿಯನ್ (ಎಸಿಇಯು ) ಏವಿಯೆಶನ್ ಇಂಡಸ್ಟ್ರೀ ಎಂಪ್ಲಾಯಿಸ್ ಗಿಲ್ಡ್(ಎಐಇಜಿ ) ಮತ್ತು ಇಂಡಿಯನ್ ಎರ್‌ಕ್ರಾಫ್ಟ್ ಟೆಕ್‌ನಿಸಿಯನ್ಸ್ ಅಸೋಸಿಯೇಶನ್ ಸಂಘಟನೆಗಳ ಸದಸ್ಯ ಸಿಬ್ಬಂದಿಗಳು ಜೂನ್ 30 ರೊಳಗೆ ಏರ್‌ಇಂಡಿಯಾ ಅಡಳಿತ ಮಂಡಳಿ ವೇತನ ನೀಡಲು ವಿಫಲವಾದಲ್ಲಿ ವೇತನವಿಲ್ಲದೇ ಕೆಲಸವಿಲ್ಲ ಎನ್ನುವ ನೀತಿಯಡಿ ಜಂಟಿಯಾಗಿ ಜೂನ್ 30 ರಂದು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಏರ್‌ಕಾರ್ಪೋರೇಶನ್ ಎಂಪ್ಲಾಯಿಸ್ ಯುನಿಯನ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜೆ.ಬಿ. ಕಡಿಯಾನ್ ತಿಳಿಸಿದ್ದಾರೆ.

ಏರ್ ಇಂಡಿಯಾ ಅಡಳಿತ ಮಂಡಳಿ ಜುಲೈ 15 ರಂದು ನೀಡಲಾಗುವ ವೇತನವನ್ನು ಜುಲೈ 30 ಕ್ಕೆ ನೀಡುವ ನಿರ್ಧಾರ ತಳೆದಿದ್ದರಿಂದ ಕಾರ್ಮಿಕ ವಿರೋಧಿ , ಕಂಪೆನಿ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಕಾರ್ಯದಲ್ಲಿ ತೊಡಗಿದಂತಾಗಿದೆ. ಜುಲೈ 30 ರಂದು ಏರ್ ಇಂಡಿಯಾದ ಸಂಪೂರ್ಣ ಸಿಬ್ಬಂಧಿ ಮುಷ್ಕರದಲ್ಲಿ ಭಾಗವಹಿಸಲಿರುವುದರಿಂದ ಯಾವುದೇ ವಿಮಾನ ಸಂಚಾರವಿರುವುದಿಲ್ಲ ಎಂದು ಹೇಳಿದ್ದಾರೆ.

ಬ್ರಿಟಿಷ್ ಏರ್‌ವೇಸ್, ತನ್ನ ಸಿಬ್ಬಂದಿಗಳಿಗೆ ಜುಲೈ ವೇತನ ಪಡೆಯದಿರುವಂತೆ ಆದೇಶ ನೀಡಿದ ವರದಿಗಳ ಹಿನ್ನೆಲೆಯಲ್ಲಿ ಏರ್‌ಇಂಡಿಯಾ ಸಿಬ್ಬಂದಿ ಕೂಡಾ ಮುಷ್ಕರಕ್ಕೆ ಮೊರೆಹೋಗಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದ್ಯುತ್ ಘಟಕಗಳಿಗೆ 180 ಮಿನ್ ಡಾಲರ್ ನೆರವು:ವಿಶ್ವಬ್ಯಾಂಕ್
2013ರ ವೇಳೆಗೆ ದೇಶದಲ್ಲಿ 771 ಮಿಲಿಯನ್ ಮೊಬೈಲ್ ಗ್ರಾಹಕರು
ಜೀ ನ್ಯೂಸ್‌ಗೆ 44 ಕೋಟಿ ರೂಪಾಯಿ ಲಾಭ
ಭಾರತದಿಂದ ಅಮೆರಿಕದಲ್ಲಿ 3 ಲಕ್ಷ ಉದ್ಯೋಗಗಳ ಸೃಷ್ಟಿ
ಎಸ್‌ಬಿಐ: ನಿರ್ದೇಶಕರಿಗಿಂತ ಲೆಕ್ಕಪರಿಶೋಧಕರಿಗೆ ಹೆಚ್ಚು ಶುಲ್ಕ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ