ಮೊಬೈಲ್ ಗ್ರಾಹಕ ಸಂಖ್ಯೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಇಳಿಮುಖವಾಗಿದ್ದು, ಮೇ ತಿಂಗಳ ಅವಧಿಯಲ್ಲಿ 11.59 ಮಿಲಿಯನ್ ಗ್ರಾಹಕರ ಸೇರ್ಪಡೆಯಾಗಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ. ಏಪ್ರಿಲ್ ತಿಂಗಳ ಅವಧಿಯಲ್ಲಿ 11.75 ಮಿಲಿಯನ್ ಮೊಬೈಲ್ ಗ್ರಾಹಕರ ಸೇರ್ಪಡೆಯಾಗಿತ್ತು ಎಂದು ಟೆಲಿಕಾಂ ರೆಗ್ಯೂಲೆಟರಿ ಅಥಾರಿಟಿ ಆಫ್ ಇಂಡಿಯಾ ತಿಳಿಸಿದೆ. ಆದರೆ, ಏಪ್ರಿಲ್ ತಿಂಗಳಿನಲ್ಲಿ 11..75 ಮಿಲಿಯನ್ ಗ್ರಾಹಕರಿಗೆ ಹೋಲಿಸಿದಲ್ಲಿ ಮೇ ತಿಂಗಳ ಅವಧಿಯಲ್ಲಿ (ಮೊಬಾಲ್ ಮತ್ತು ಸ್ಥಿರ ) ಸಂಪರ್ಕ ಪಡೆದ ಗ್ರಾಹಕರ ಸಂಖ್ಯೆ 11.44 ಮಿಲಿಯನ್‌ಗಳಾಗಿತ್ತು.ಇದರಿಂದಾಗಿ ದೇಶದ ಒಟ್ಟು ಮೊಬೈಲ್ ಹಾಗೂ ಸ್ಥಿರ ದೂರವಾಣಿ ಗ್ರಾಹಕರ ಸಂಖ್ಯೆ 441.47 ಮಿಲಿಯನ್‌ಗೆ ತಲುಪಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ. ಒಟ್ಟು ಮೊಬೈಲ್ ಗ್ರಾಹಕರ (ಜಿಎಸ್‌ಎಂ,ಸಿಡಿಎಂಎ ಮತ್ತು ಡಬ್ಲೂಎಲ್‌ಎಲ್ ) ಸಂಖ್ಯೆ 2009 ಮೇ ತಿಂಗಳಾಂತ್ಯಕ್ಕೆ 415.25 ಮಿಲಿಯನ್‌ಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. ಸ್ಥಿರ ದೂರವಾಣಿ ಕ್ಷೇತ್ರದಲ್ಲಿ ಮೇ ತಿಂಗಳಾಂತ್ಯಕ್ಕೆ 37.66 ಮಿಲಿಯನ್‌ಗಳಿಗೆ ತಲುಪಿದೆ. ಬ್ರಾಡ್‌ಬ್ಯಾಂಡ್ ಗ್ರಾಹಕರ ಸಂಖ್ಯೆಯಲ್ಲಿ ಮೇ ತಿಂಗಳಾಂತ್ಯಕ್ಕೆ 6.40 ಮಿಲಿಯನ್‌ಗಳಿಗೆ ತಲುಪಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ. |