ಪ್ರಸಕ್ತ ವರ್ಷದಲ್ಲಿ ಪೆಟ್ರೋಲೀಯಂ ಉತ್ಪನ್ನಗಳ ದರ ಏರಿಳಿಕೆಯಿಂದಾಗಿ ಸುಮಾರು 50 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬಂದಿದ್ದರೂ ದೇಶದ ತೈಲ ಕಂಪೆನಿಗಳು 50 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮುಖ್ಯಸ್ಥ ಎಸ್.ಬೆಹುರಿಯಾ ಹೇಳಿದ್ದಾರೆ . ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದಲ್ಲಿ ತೈಲ ದರದಲ್ಲಿ ಸ್ಥಿರತೆ ಕಂಡುಬಂದಿದೆ. ಕಳೆದ ವರ್ಷಧ ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 147 ಡಾಲರ್‌ಗಳವರೆಗೆ ಏರಿಕೆ ಕಂಡಿದ್ದು, ಡಿಸೆಂಬರ್ ವೇಳೆಗೆ ಪ್ರತಿ ಬ್ಯಾರೆಲ್‌ಗೆ 35 ಡಾಲರ್‌ಗಳಿಗೆ ಇಳಿಕೆ ಕಂಡಿತ್ತು.ಇದೀಗ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ 69 ರಿಂದ 70 ಡಾಲರ್‌ಗಳಿಗ ತಲುಪಿದೆ.ಕಳೆದ ವರ್ಷ ತೈಲದರ ಸರಾಸರಿ 83 ಡಾಲರ್‌ಗಳಾಗಿತ್ತು. ಸಧ್ಯ ಪ್ರತಿ ಬ್ಯಾರೆಲ್‌ಗೆ 53ಡಾಲರ್‌ಗಳಾಗಿವೆ. ಹಿಂದಿನ ವರ್ಷದಂತೆ ತೈಲ ದರದಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ ಎಂದು ತಿಳಿಸಿದ್ದಾರೆ. ಪೆಟ್ರೋಲೀಯಂ ಉತ್ಪನ್ನಗಳ ದರ ಏರಿಕೆ ಸ್ವಾಗತಾರ್ಹ.ದರ ಏರಿಕೆಯಿಂದಾಗಿ ಕಂಪೆನಿಗಳು ಲಾಭದತ್ತ ಮರಳು ಸಹಾಯಕವಾಗುತ್ತದೆ. ಇದೀಗ ಪ್ರತಿ ಲೀಟರ್ ಪೆಟ್ರೋಲ್‌ಗೆ 6 ರೂಪಾಯಿ ಡೀಸೆಲ್‌ಗೆ 3 ರೂಪಾಯಿ ಸೀಮೆಎಣ್ಣೆಗೆ 12 ರೂಪಾಯಿ ಮತ್ತು ಗ್ಯಾಸ್ ಸಿಲೆಂಡರ್‌ಗೆ 70 ರೂಪಾಯಿ ನಷ್ಟವನ್ನು ತೈಲ ಕಂಪೆನಿಗಳು ಎದುರಿಸುತ್ತಿವೆ. |