ಕೇಂದ್ರ ಸರಕಾರಗಳು ಘೋಷಿಸಿದ ಉತ್ತೇಜನ ಪ್ಯಾಕೇಜ್‌ಗಳು ಸಮರ್ಪಕವಾಗಿ ಜಾರಿಯಾದಲ್ಲಿ, ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ ಏಷ್ಯಾ ಆರ್ಥಿಕತೆ ಮುಂಬರುವ ವರ್ಷದಲ್ಲಿ ಮರಳಿ ಸುಸ್ಥಿತಿಗೆ ಬರಲಿದೆ ಎಂದಿ ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ ,ಜಾಗತಿಕ ರಫ್ತು ವಹಿವಾಟಿನಲ್ಲಿ ಚೇತರಿಕೆಯಾಗುವವರೆಗೆ ಏಷ್ಯಾ ರಫ್ತು ವಹಿವಾಟಿನ ಏರಿಕೆಯಲ್ಲಿ ವಿಳಂಬವಾಗಲಿದೆ ಎಂದು ಮನಿಲಾದ ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರೆಜತ್ ನಾಗ್ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಜಗತ್ತಿನ ಇತರ ರಾಷ್ಟ್ರಗಳಿಗಿಂತ ಏಷ್ಯಾ ಮೊದಲು ಹೊರಬರಲಿದೆ ಎಂದು ರೆಜತ್ ನಾಗ್ ,ಸಿಯೋಲ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕಾನಾಮಿಕ್ ಫೋರಂ ಆನ್ ಈಸ್ಟ್ ಏಷ್ಯಾ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಕೆಲ ದಶಕಗಳಿಂದ ಪೂರ್ವಿಯ ಏಷ್ಯಾ ರಾಷ್ಟ್ರಗಳ ಆರ್ಥಿಕ ಬಲಾಢ್ಯತೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಸದೃಢವಾಗಿದೆ. ಪ್ರಸ್ತುತ ಎದುರಾಗಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಏಷ್ಯಾ ರಾಷ್ಟ್ರಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ರೆಜತ್ ನಾಗ್ ಕರೆ ನೀಡಿದರು |