ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸಾಲದ ವಹಿವಾಟಿನಿಂದಾಗಿ ಶೇ.40 ರಷ್ಟು ಲಾಭವನ್ನು ನಿರೀಕ್ಷಿಸಿರುವ ಯೆಸ್ ಬ್ಯಾಂಕ್ , ಮುಂಬರುವ ಒಂಬತ್ತು ತಿಂಗಳಲ್ಲಿ ಬ್ಯಾಂಕ್ ಆರು ವಿಭಾಗಗಳಿಗೆ 500 ವಿಶೇಷ ತಜ್ಞರು ಸೇರಿದಂತೆ ಒಟ್ಟು 900 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. ಮುಂಬರುವ ಸೆಪ್ಟೆಂಬರ್‌ವರೆಗೆ ಕನಿಷ್ಠ 500 ವ್ಯವಸ್ಥಾಪಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ಯೆಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾನಾ ಕಪೂರ್ ತಿಳಿಸಿದ್ದಾರೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಒಟ್ಟಾರೆ 900 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಪ್ರಸ್ತು 2700 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಮಾರ್ಚ್ 2009ರ ವೇಳೆಗೆ ಸಿಬ್ಬಂದಿಯ ಸಂಖ್ಯೆ 3600ಕ್ಕೆ ತಲುಪಲಿದೆ.500 ಸಿಬ್ಬಂದಿಗಳನ್ನು ವ್ಯವಸ್ಥಾಪಕರ ಮಟ್ಟದಲ್ಲಿ ಹಾಗೂ 400 ಸಿಬ್ಬಂದಿಗಳನ್ನು ರಿಟೇಲ್ ಸರ್ವಿಸ್ ಮತ್ತು ಮಾರಾಟ ವಿಭಾಗದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೃಷಿ -ವಹಿವಾಟು ಮೂಲಸೌಕರ್ಯ, ಇಂಧನ, ಹೆಲ್ತ್ ಕೇರ್ ಮತ್ತು ಸಂಪರ್ಕ ಕ್ಷೇತ್ರಗಳು ಸೇರಿದಂತೆ ಒಟ್ಟು ಆರು ಕ್ಷೇತ್ರಗಳನ್ನು ಗುರುತಿಸಿಲಾಗಿದ್ದು ದೇಶದ ಭವಿಷ್ಯದ ಕೈಗಾರಿಕೆಗಳಾಗಿರುವುದರಿಂದ ಬ್ಯಾಂಕ್ ಇಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. |