ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ತಯಾರಿಕೆಯಲ್ಲಿ ಖ್ಯಾತಿ ಪಡೆದ ಬಜಾಜ್ ಅಟೋ ಕಂಪೆನಿ ,ಇಂಧನ ಉಳಿತಾಯ ಹಾಗೂ ಕಡಿಮೆ ಪರಿಸರ ಮಾಲಿನ್ಯದ ಆರ್‌ಇ-ಜಿಡಿಐ ಪರಿಸರ ಸ್ನೇಹಿ ಅಟೋ ರಿಕ್ಷಾಗಳನ್ನು ಕರಾವಳಿ ನಗರದಲ್ಲಿ ಬಿಡುಗಡೆ ಮಾಡಿದೆ.
ಪರಿಸರಸ್ನೇಹಿ ಅಟೋರಿಕ್ಷಾವನ್ನು ಗ್ಯಾಸೊಲೈನ್ ಟೆಕ್ನಾಲಾಜಿ ತಂತ್ರವನ್ನು ಉಪಯೋಗಿಸಿಕೊಂಡು ಗ್ಯಾಸೊಲೈನ್ ಡೈರೆಕ್ಟ್ ಇಂಜೆಕ್ಷನ್ ಇಂಜಿನ ಅಳವಡಿಸಿದ್ದರಿಂದ ಎಲ್‌ಪಿಜಿ ಮತ್ತು ಸಿಎನ್‌ಜಿ ಹೊರಸೂಸುವ ಮಾಲಿನ್ಯಕ್ಕಿಂತಲೂ ಕಡಿಮೆ ಮಾಲಿನ್ಯ ಹೊರಸೂಸಲಿದೆ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಶ್ರೀರಾಮ್ ವೆಂಕಟೇಶ್ವರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಜಾಜ್ ಕಂಪೆನಿಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ ವಿನ್ಯಾಸವನ್ನು ರೂಪಿಸಿದ್ದು, ಕಡಿಮೆ ಮಾಲಿನ್ಯವನ್ನು ಹೊರಸೂಸುವುದಲ್ಲದೇ ಅಟೋರಿಕ್ಷಾ ಮಾಲೀಕರು ಅಲ್ಪ ನಿರ್ವಹಣಾ ವೆಚ್ಚದಲ್ಲಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಗ್ಯಾಸೊಲೈನ್ ಟೆಕ್ನಾಲಾಜಿ ತಂತ್ರಜ್ಞಾನವನ್ನು ಅಳವಡಿಸಿದ್ದರಿಂದ ಶೇ.33 ರಷ್ಟು ಇಂಧನ ಸಾಮರ್ಥ್ಯವನ್ನು ತೋರುವುದಲ್ಲದೆ, ಇಂಧನ ದರಗಳು ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಡಿಮೆ ಇಂಧನದಲ್ಲಿ ಹೆಚ್ಚಿನ ದೂರ ಕ್ರಮಿಸುವ ಪರಿಸರ ಸ್ನೇಹಿ ಅಟೋರಿಕ್ಷಾ ಸೂಕ್ತವಾಗಿದೆ. ಅಟೋರಿಕ್ಷಾ ದರ ಕೇವಲ 1.17 ಲಕ್ಷ ರೂಪಾಯಿಗಳಾಗಿವೆ ಎಂದು ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಶ್ರೀರಾಮ್ ವೆಂಕಟೇಶ್ವರನ್ ಹೇಳಿದ್ದಾರೆ . |