ಹಣದುಬ್ಬರ ಮೂರು ದಶಕಗಳಲ್ಲಿ ಪ್ರಥಮ ಬಾರಿಗೆ ಋಣಾತ್ಮಕ ವಲಯವನ್ನು ಪ್ರವೇಶಿಸಿದ್ದರೂ ಅಹಾರ ಮತ್ತು ಕಚ್ಚಾ ತೈಲ ದರಗಳು ಸ್ಥಿರವಾಗಿದ್ದರಿಂದ ಕಳವಳಪಡುವ ಅಗತ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಡಿ.ಸುಬ್ಬಾರಾವ್ ಹೇಳಿದ್ದಾರೆ. ಭಾರತ ಯಾವುದೇ ಬೇಡಿಕೆಗಳ ನಿರ್ಭಂಧದಿಂದ ಬಳಲುತ್ತಿಲ್ಲವಾದ್ದರಿಂದ ಹಣದುಬ್ಬರ ಕುರಿತಂತೆ ಕಳವಳಪಡುವ ಅಗತ್ಯವಿಲ್ಲ ಎಂದು ಸುಬ್ಬಾರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಸಗಟು ಸೂಚ್ಯಂಕ ದರ ಋಣಾತ್ಮಕ ವಲಯವನ್ನು ಪ್ರವೇಶಿಸಿದ್ದರೂ ಅಹಾರಧಾನ್ಯಗಳು ಸೇರಿದಂತೆ ಕೆಲ ವಸ್ತುಗಳ ಹಣದುಬ್ಬರ ಸೂಚ್ಯಂಕ ಉತ್ತಮವಾಗಿದೆ ಎಂದು ಸುಬ್ಬಾರಾವ್ ಹೇಳಿದ್ದಾರೆ. ಇದೇ ಸಮಯದಲ್ಲಿ ತೈಲ ದರಗಳು ಸ್ಥಿರತೆಯನ್ನು ಕಾಣುತ್ತಿವೆ.ಆದರೆ ಜಾಗತಿಕ ಅಹಾರ ಉತ್ಪಾದನೆ ಬೇಡಿಕೆಗಿಂತ ಕಡಿಮೆ ಉತ್ಪಾದನೆಯಾಗುತ್ತಿದೆ. ಎಲ್ಲ ಬೆಳವಣಿಗೆಗಳನ್ನು ಜುಲೈನಲ್ಲಿ ನಡೆಯಲಿರುವ ಪರಿಶೀಲನಾ ಸಭೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಅಶ್ವಾಸನೆ ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ವಾರ್ಷಿಕ ಮೇಲ್ವಿಚಾರಣಾ ನೀತಿಯಂತೆ, 2010ರ ಮಾರ್ಚ್ ಅಂತ್ಯದ ವೇಳೆಗೆ ಹಣದುಬ್ಬರ ದರ ಶೇ.4ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಆರ್‌ಬಿಐ ತಿಳಿಸಿದೆ. ವಾರ್ಷಿಕ ಹಣದುಬ್ಬರ ದರ ಜೂನ್ 6ಕ್ಕೆ ವಾರಂತ್ಯಗೊಂಡಂತೆ ಮೈನಸ್ ಶೇ.1.61ಕ್ಕೆತಲುಪಿದೆ. ಹಿಂದಿನ ವಾರದ ಅವಧಿಯಲ್ಲಿ ಹಣದುಬ್ಬರ ದರ ಶೇ.0.13ರಷ್ಟಾಗಿತ್ತು. ಕಳೆದ ವರ್ಷದ ಜೂನ್ ಮೊದಲ ವಾರದ ಅವಧಿಯಲ್ಲಿ ಹಣದುಬ್ಬರ ದರ ಶೇ.11.66 ರಷ್ಟಾಗಿತ್ತು. |