ಜಾಗತಿಕ ಚಿನಿವಾರಪೇಟೆಗಳ ದುರ್ಬಲ ವಹಿವಾಟಿನಿಂದಾಗಿ ದೇಶಿಯ ವಹಿವಾಟಿನಲ್ಲಿ ಕೂಡಾ ಚಿನ್ನದ ದರ ಪ್ರತಿ 10 ಗ್ರಾಂಗೆ 100 ರೂಪಾಯಿಗಳ ಇಳಿಕೆಯಾಗಿ 14,690 ರೂಪಾಯಿಗಳಿಗೆ ತಲುಪಿದೆ. ಆದಾಗ್ಯೂ , ಬೆಳ್ಳಿ ವಹಿವಾಟಿನ ಅಂತ್ಯಕ್ಕೆ ಚೇತರಿಸಿಕೊಂಡು ಪ್ರತಿ ಕೆಜಿಗೆ 50 ರೂಪಾಯಿ ಕುಸಿತವಾಗಿ 22,650 ರೂಪಾಯಿಗಳಿಗೆ ತಲುಪಿದೆ. ಮದುವೆ ಮತ್ತು ಹಬ್ಬದ ಸೀಸನ್ ಇಲ್ಲಿದರುವ ಕಾರಣ ಚಿನ್ನದ ದರದಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ವಹಿವಾಟುದಾರರು ತಿಳಿಸಿದ್ದಾರೆ.ಸಾಗರೋತ್ತರ ಮಾರುಕಟ್ಟೆಯಲ್ಲಿ ಇತರ ಕರೆನ್ಸಿಗಳ ಎದಿರು ಡಾಲರ್ ಮೌಲ್ಯದಲ್ಲಿ ಕುಸಿತವಾಗಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಚಿನಿವಾರಪೇಟೆಯಲ್ಲಿ ವಹಿವಾಟು ದುರ್ಬಲಗೊಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ಸ್ಟ್ಯಾಂಡರ್ಡ್ ಚಿನ್ನ ಮತ್ತು ಆಭರಣಗಳು ಪ್ರತಿ 10 ಗ್ರಾಂಗೆ ತಲಾ 100 ರೂಪಾಯಿಗಳ ಇಳಿಕೆ ಕಂಡು ಕ್ರಮವಾಗಿ 14,690 ಮತ್ತು 14,540 ರೂಪಾಯಿಗಳಿಗೆ ತಲುಪಿದೆ.ಕೈಗಾರಿಕೋದ್ಯಮ ವಲಯದ ಉದ್ಯಮಿಗಳು ಉದ್ಯಮದ ಉಪಯೋಗಕ್ಕಾಗಿ ಬೆಳ್ಳಿಯನ್ನು ಖರೀದಿಸಲು ಆಸ್ಕತಿ ತೋರಿದ ಹಿನ್ನೆಲೆಯಲ್ಲಿ ಪ್ರತಿ ಕೆಜಿಗೆ ಕೇವಲ 50 ರೂಪಾಯಿ ಕುಸಿತ ಕಂಡು 22,670 ರೂಪಾಯಿಗಳಿಗೆ ತಲುಪಿದೆ.ಬೆಳ್ಳಿಯ ನಾಣ್ಯಗಳ ಬೇಡಿಕೆ ಏಂದಿನಂತೆ ಮುಂದುವರಿದಿದ್ದು, ಖರೀದಿ ದರ 29,200 ಹಾಗೂ ಮಾರಾಟ ದರ 29,300 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ. |