ಮುಂದಿನ ಆರು ತಿಂಗಳಲ್ಲಿ ಭಾರತದ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹೆಗಾರ ಸುರೇಶ್ ತೆಂಡೂಲ್ಕರ್ ಅಭಿಪ್ರಾಯಿಸಿದ್ದಾರೆ.
"ಯುಪಿಎ ಸರ್ಕಾರವು ಬಹುಮತದೊಂದಿಗೆ ಮರಳಿ ಅಧಿಕಾರಕ್ಕೆ ಬಂದಿರುವ ಕಾರಣ, ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯು ಸುಧಾರಿಸಿದ್ದು, ಮುಂದಿನ ಆರು ತಿಂಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಬಹುದು" ಎಂಬುದಾಗಿ ಅವರು ನುಡಿದರು.
ಅವರು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ಮಾತನಾಡುತ್ತಿದ್ದರು.
ಸರ್ಕಾರವು ಕೈಗೊಂಡಿರುವ ಹಣಕಾಸು ನೀತಿಗಳು ಹಾಗೂ ಇತರ ಪ್ಯಾಕೇಜುಗಳು ಆರ್ಥಿಕತೆ ಚೇತರಿಕೆಗೆ ಸಹಾಯವಾಗಿದೆ ಎಂದು ಹೇಳಿದ ಅವರು, ಸಾರ್ವಜನಿಕ ವಲಯದ ಬ್ಯಾಂಕುಗಳು ಮಂದಗತಿಯಲ್ಲಿ ತಮ್ಮ ಸಾಲದರಗಳನ್ನು ಕಡಿಮೆಗೊಳಿಸುತ್ತಿವೆ ಎಂದು ಅವರು ನುಡಿದರು. |