ಸಾಗರೋತ್ತರ ಮಾರುಕಟ್ಟೆಯ ಪ್ರಬಲ ವಹಿವಾಟು ಹಾಗೂ ಅಮುದುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 6 ಪೈಸೆ ಕುಸಿತ ಕಂಡಿದೆ ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‍ಗೆ 48.08 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 6 ಪೈಸೆ ಕುಸಿತ ಕಂಡಿದ್ದರಿಂದ 48.14 ರೂಪಾಯಿಗಳಿಗೆ ತಲುಪಿದೆ. ಸಾಗರೋತ್ತರ ಹಾಗೂ ದೇಶಿಯ ಮಾರುಕಟ್ಟೆಗಳಲ್ಲಿ, ಅಮುದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಏರಿಕೆಯಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ. ಶೇರುಪೇಟೆಯ ಸೂಚ್ಯಂಕ ದುರ್ಬಲವಾಗಿದ್ದರಿಂದ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾಗಿದ್ದರಿಂದ, ದೇಶಿಯ ಕರೆನ್ಸಿ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. |