ದೇಶದ ಪ್ರಮುಖ 10 ಕಂಪೆನಿಗಳು ಕಳೆದ ವಾರಂತ್ಯದಲ್ಲಿ ಮಾರುಕಟ್ಟೆಯ ಒಟ್ಟು ಬಂಡವಾಳದಲ್ಲಿ 1,28, 000 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದು , ರಿಲಯನ್ಸ್ ಇಂಡಸ್ಟೀಸ್ ಹೆಚ್ಚಿನ ನಷ್ಟ ಅನುಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 2009 ಜೂನ್ 19ಕ್ಕೆ ವಾರಂತ್ಯಗೊಂಡಂತೆ 3,20,996 ಕೋಟಿ ರೂಪಾಯಿಗಳ ಒಟ್ಟು ಮಾರುಕಟ್ಟೆ ಬಂಡವಾಳದಲ್ಲಿ 49,917 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ. ಮುಂಬೈ ಹೈಕೋರ್ಟ್ ಕಂಪೆನಿಯ ವಿರುದ್ಧ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಹಿನ್ನೆಡೆ ಅನುಭವಿಸಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.
ಮುಂಬೈ ಶೇರುಪೇಟೆಯ ಶುಕ್ರವಾರದ ವಹಿವಾಟಿನಲ್ಲಿ ಶೇ.13.45 ರಷ್ಟು ಕುಸಿತಗೊಂಡು ಪ್ರತಿ ಶೇರುದರ 2,039.60 ರೂಪಾಯಿಗಳಿಗೆ ತಲುಪಿದೆ.
ನಾಲ್ಕು ಖಾಸಗಿ ಕ್ಷೇತ್ರದ ಕಂಪೆನಿಗಳು ಹಾಗೂ ಆರು ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಏಲೈಟ್ ಕ್ಲಬ್ ,ಕಳೆದ ಜೂನ್ 19ಕ್ಕೆ ವಾರಂತ್ಯಗೊಂಡಂತೆ 15,54,979 ಕೋಟಿ ರೂಪಾಯಿಗಳ ಒಟ್ಟು ಮಾರುಕಟ್ಟೆ ಬಂಡವಾಳದಲ್ಲಿ 1,28,066 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ. ಹಿಂದಿನ ವಾರದ ಅವಧಿಯಲ್ಲಿ 16,83,045 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿತ್ತು.
ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್(ಒಎನ್‌ಜಿಸಿ ) , ನ್ಯಾಷನಲ್ ಧರ್ಮಲ್ ಪವರ್ ಕಾರ್ಪೋರೇಶನ್ (ಎನ್‌ಟಿಪಿಸಿ ) ಕಂಪೆನಿಗಳು ಒಟ್ಟು 43,895 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿವೆ.
ಖಾಸಗಿ ಕ್ಷೇತದ ದೈತ್ಯ ಟೆಲಿಕಾಂ ಕಂಪೆನಿ ಭಾರ್ತಿ ಏರ್‌ಟೆಲ್ ,ಒಟ್ಟು ಮಾರುಕಟ್ಟೆ ಬಂಡವಾಳ 1,52,929 ಕೋಟಿ ರೂಪಾಯಿಗಳಲ್ಲಿ 4,717 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ.
ಖನಿಜ ಮತ್ತು ಉಕ್ಕು ವಹಿವಾಟು ಸಂಸ್ಥೆ (ಎಂಎಂಟಿಸಿ) ಮತ್ತು (ಎನ್‌ಎಂಡಿಸಿ ) ಕಂಪೆನಿಗಳು ಕಳೆದ ವಾರದ ಅವಧಿಯಲ್ಲಿ ಒಟ್ಟು 26,354 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿವೆ.
ಎಸ್‌ಬಿಐ ಬ್ಯಾಂಕ್, ಒಟ್ಟು ಮಾರುಕಟ್ಟೆ ಬಂಡವಾಳದಲ್ಲಿ 5,546 ಕೋಟಿ ರೂಪಾಯಿ , ಬಿಎಚ್‌ಇಎಲ್ 6,139 ಕೋಟಿ ರೂಪಾಯಿಗಳ ನಷ್ಟ ಹೊಂದಿವೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಮಾಹಿತಿ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಟೆಕ್ನಾಲಾಜೀಸ್, ಒಟ್ಟು ಮಾರುಕಟ್ಟೆ ಬಂಡವಾಳದಲ್ಲಿ 2,472 ಕೋಟಿ ರೂಪಾಯಿ ,ಲಾರ್ಸನ್ ಆಂಡ್ ಟೌಬ್ರೋ 5,062 ಕೋಟಿ ರೂಪಾಯಿಗಳ ನಷ್ಟವನ್ನು ಕಂಡಿವೆ.
ಐಸಿಐಸಿಐ ಬ್ಯಾಂಕ್, 2,971 ಕೋಟಿ ರೂಪಾಯಿ, ಎಚ್‌ಡಿಎಫ್‌ಸಿ ಬ್ಯಾಂಕ್ 1,062 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ |