ದೇಶದ ಬಹುತೇಕ ಉದ್ಯಮಿಗಳು ಮುಂಬರುವ ಬಜೆಟ್‌ನಲ್ಲಿ ಮಂಡಿಸಲಾಗುವ ಸರಕಾರದ ಉತ್ತೇಜನ ಪ್ಯಾಕೇಜ್‌ಗಳ ನಿರೀಕ್ಷೆಯಲ್ಲಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಬಳುತ್ತಿರುವ ಉದ್ಯಮ ಅಥವಾ ಕ್ಷೇತ್ರವನ್ನು ಪರಿಷ್ಕರಿಸಿ ಬೃಹತ್ ಸಾರ್ವಜನಿಕ ಹೂಡಿಕೆಗೆ ಅನುವಾಗುವಂತೆ ಬಜೆಟ್‌ನಲ್ಲಿ ರಿಯಾಯಿತಿಗಳನ್ನು ಘೋಷಿಸಬೇಕು ಎಂದು ಭಾರ್ತಿ ಏರ್‌ಟೆಲ್ ಮುಖ್ಯಸ್ಥ ಸುನೀಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.
ಇದೀಗ, ನಾನು ನಿಗದಿತ ಕ್ಷೇತ್ರಗಳ ಉತ್ತೇಜನ ಪ್ಯಾಕೇಜ್‌ಗಳ ನಿರೀಕ್ಷೆಯಲ್ಲಿಲ್ಲ. ಉತ್ತೇಜನ ಪ್ಯಾಕೇಜ್‌ಗಳಿಂದ ಕೆಲ ಉದ್ಯಮಗಳಿಗೆ ಮಾತ್ರ ಬೆಂಬಲ ದೊರೆಯಬಹುದು. ಉತ್ತೇಜನ ಪ್ಯಾಕೇಜ್, ಸಾರ್ವಜನಿಕ ಕ್ಷೇತ್ರದಲ್ಲಿ ಹೆಚ್ಟಿನ ಹೂಡಿಕೆಯನ್ನು ತರುವ ಮಾದರಿಯಲ್ಲಿರಬೇಕು ಎಂದು ಭಾರ್ತಿ ಏರ್‌ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್ ಖಾಸಗಿ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೈಗಾರಿಕೋದ್ಯಮ ಸಂಘಟನೆಯಾದ ಸಿಐಐನ ಮಾಜಿ ಅಧ್ಯಕ್ಷರಾದ ಮಿತ್ತಲ್ ಮಾತನಾಡಿ , ಮೂಲಸೌಕರ್ಯ, ರಸ್ತೆ ಬಂದರು ಕ್ಷೇತ್ರಗಳು ಸೇರಿದಂತೆ ಸರಕಾರಿ -ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಯೋಜನೆಗಳು , ಟೆಲಿಕಾಂ ಕ್ಷೇತ್ರಗಳತ್ತ ಸರಕಾರ ಗಮನಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ದೇಶದ ಹಲವು ಖಾಸಗಿ ಕ್ಷೇತ್ರದ ಉದ್ಯಮಗಳು ಮುಖ್ಯವಾಹಿನಿಯಲ್ಲಿವೆ. ಉದಾಹರಣೆಗೆ ಟೆಲಿಕಾಂ ಕ್ಷೇತ್ರ ಮೇರುಗತಿಯಲ್ಲಿದ್ದು, ಟೆಲಿಕಾಂ ಕ್ಷೇತ್ರದಿಂದ ಬರುವ ಆದಾಯವನ್ನು ಮೂಲಸೌಕರ್ಯ ಕ್ಷೇತ್ರದಲ್ಲಿ ತೊಡಗಿಸಿದಲ್ಲಿ ಉತ್ತಮ ಆರಂಭವಾಗುತ್ತದೆ ಎಂದು ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ. |