ದೇಶದ ಕಾರ್ಮಿಕ ಸುಧಾರಣಾ ನೀತಿಯನ್ನು ಬೆಂಬಲಿಸಿದ ಉದ್ಯಮಿ ಸುನೀಲ್ ಮಿತ್ತಲ್, ಭಾರತದಲ್ಲಿ ಹೈರ್ ಆಂಡ್ ಫೈರ್ ನೀತಿ ಸಮ್ಮತಿಸುವಂತಹದಲ್ಲ. ಆದ್ದರಿಂದ ಭಾರತದ ಕಾರ್ಪೋರೇಟ್ ಕಂಪೆನಿಗಳು ಉದಾರನೀತಿಯನ್ನು ಅನುಸರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಕಾರ್ಮಿಕ ನೀತಿಯಲ್ಲಿ ಸುಧಾರಣೆ ಅಲ್ಪಮಟ್ಟಿನ ಪರಿಹಾರ ದೊರೆಯಲು ಸಾಧ್ಯ. ಆದರೆ ಭಾರತದಂತಹ ರಾಷ್ಟ್ರದಲ್ಲಿ ಹೈರ್ ಆಂಡ್ ಫೈರ್ ಪಾಲಿಸಿ ಸೂಕ್ತವಲ್ಲ ಎಂದು ಭಾರ್ತಿಗ್ರೂಪ್ ಮುಖ್ಯಸ್ಥ ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಮಿಕರ ಕುರಿತಂತೆ ನಾವು (ಕಂಪೆನಿಗಳು) ತುಂಬಾ ಉದಾರಿಗಳಾಗಬೇಕು. ನಾವು ನಮ್ಮನ್ನು ಪ್ರೀತಿಸುವ ಹಾಗೇ ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು.ದೇಶದ ಉದ್ಯಮಿಗಳು ಕಾರ್ಮಿಕರೊಂದಿಗೆ ಉತ್ತಮ ಹೊಂದಾಣಿಕೆ ತೋರುವ ವಿಶ್ವಾಸವಿದೆ ಎಂದು ನುಡಿದಿದ್ದಾರೆ.
ಆದಾಗ್ಯೂ , ಪ್ರಸ್ತುತ ಕಾರ್ಪೋರೇಟ್ ಕಂಪೆನಿಗಳಿಗೆ ಕಷ್ಟದ ಸಮಯವಾಗಿದೆ ಎನ್ನುವುದನ್ನು ಒಪ್ಪಿಕೊಂಡ ಅವರು, ಉದ್ಯೋಗಿಗಳನ್ನು ವಜಾಗಳಿಸುವಂತಹ ಆರ್ಥಿಕ ಸ್ಥಿತಿ ಎದುರಾದಲ್ಲಿ ಸರಕಾರ ಹಾಗೂ ಕಂಪೆನಿಗಳು ಮುಕ್ತವಾಗಿ ಚರ್ಚಿಸಿ ಪರಿಹಾರ ಹುಡುಕಬೇಕು ಎಂದು ಹೇಳಿದ್ದಾರೆ.
ಕಂಪೆನಿಗಳು ಕಷ್ಟದಲ್ಲಿದ್ದಾಗ ಸರಕಾರಗಳು ಸಮಯಕ್ಕೆ ಸರಿಯಾಗಿ ರಿಯಾಯತಿಗಳನ್ನು ಘೋಷಿಸಬೇಕು. ಸರಕಾರ ಹಾಗೂ ಕೈಗಾರಿಕೋದ್ಯಮಿಗಳು ಸಮಸ್ಯೆಗಳನ್ನು ವೇದಿಕೆಯಲ್ಲಿ ಚರ್ಚಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಅವಶ್ಯಕವಾಗಿದೆ ಎಂದು ಮಿತ್ತಲ್ ತಿಳಿಸಿದ್ದಾರೆ. |