ಭವಿಷ್ಯ ನಿಧಿ ಯೋಜನೆಯಡಿಯಲ್ಲಿ ಗ್ರಾಹಕರಿಗೆ ನೀಡಲಾಗುತ್ತಿರುವ ಬಡ್ಡಿ ದರವನ್ನು ಮುಂಬರುವ ಮಾರ್ಚ್ 2010ರವರೆಗೆ ಶೇ.8.5ರಷ್ಟು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಕಾರ್ಮಿಕ ಖಾತೆ ಕಾರ್ಯದರ್ಶಿ ಪಿಳ್ಳೈ ತಿಳಿಸಿದ್ದಾರೆ.
ಗ್ರಾಹಕರಿಗೆ ನೀಡಲಾಗುತ್ತಿರುವ ಶೇ.8.6ರಷ್ಟು ಬಡ್ಡಿ ದರವನ್ನು ಮುಂದಿನ ವರ್ಷದ ಮಾರ್ಚ್ ತಿಂಗಳವರೆಗೆ ಯಥಾರೀತಿ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸುಧಾ ಪಿಳ್ಳೈ ಹೇಳಿದ್ದಾರೆ.
ಉದ್ಯೋಗ ಭವಿಷ್ಯ ನಿಧಿಯ ಯೋಜನೆಯ ದರ ನಿಗದಿ ಸಮಿತಿಯಲ್ಲಿ ಸುಧಾ ಪಿಳ್ಳೈ ಕಾರ್ಯನಿರ್ವಹಿಸುತ್ತಿದ್ದು,ಜುಲೈ 4 ರಂದು ನಡೆಯಲಿರುವ ಅಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದ್ದಾರೆ. |