ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕೇವಲ ಮೂರೇ ದಿನಗಳಲ್ಲಿ 'ಐಫೋನ್ 3ಜಿಎಸ್' ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಾರಾಟವಾಗಿದೆ ಎಂದು 'ಆಪಲ್ ಐನ್‌ಸಿ' ಹೇಳಿಕೊಂಡಿದೆ. ಆಗಸ್ಟ್ ಹೊತ್ತಿಗೆ ಭಾರತದಲ್ಲೂ ಈ ಮಾದರಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.ಕಳೆದ ಶುಕ್ರವಾರದಂದು 'ಐಫೋನ್ 3ಜಿಎಸ್' ಮಾದರಿಯು ಅಮೆರಿಕಾ ಮತ್ತು ಇತರ ಏಳು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿತ್ತು. ಇದರ ಬೆನ್ನಿಗೆ ಹಳೇ ಮಾದರಿಯಲ್ಲಿ ಭಾರೀ ದರ ಕಡಿತ ಮಾಡಿದ ಬಗ್ಗೆಯೂ ವರದಿಯಾಗಿದೆ. ' ಐಫೋನ್ 3ಜಿ'ಗೆ ಭಾರತದಲ್ಲಿ ಸುಮಾರು 36 ಸಾವಿರ ರೂಪಾಯಿಗಳನ್ನು ನಿಗದಿ ಪಡಿಸಲಾಗಿತ್ತು. ಈಗಿನ ಕಡಿತದ ಪ್ರಕಾರ 31 ಸಾವಿರ ರೂಪಾಯಿಗಳಿಗೆ ಹಳೆ ಮಾದರಿ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ.ಇದೀಗ ಬಿಡುಗಡೆ ಮಾಡಲಾಗಿರುವ ಮಾದರಿಯು ಈ ಹಿಂದಿನ ಆಪಲ್ ಜನಪ್ರಿಯ 'ಐಫೋನ್ 3ಜಿ'ಗಿಂತ ಎರಡು ಪಟ್ಟು ವೇಗವನ್ನು ಹೊಂದಿದೆ. ಅಲ್ಲದೆ ಅಟೋಫೋಕಸ್ ಕ್ಯಾಮರಾ, ವಿಡಿಯೋ ರೆಕಾರ್ಡಿಂಗ್ ಮತ್ತು ವಾಯ್ಸ್ ಕಂಟ್ರೋಲ್ ಮುಂತಾದ ಇತರ ಕೆಲವು ವಿಶೇಷ ಸೌಲಭ್ಯಗಳು ಕೂಡ ಹೊಸ ಮಾದರಿ ಐಫೋನ್‌ನಲ್ಲಿದೆ.ಗ್ರಾಹಕರು ಈ ಮಾದರಿಯನ್ನು ಬೆಂಬಲಿಸುತ್ತಿದ್ದಾರೆ, ಐಫೋನ್ ಯಶಸ್ವಿಯಾಗುತ್ತಿದೆ ಎಂದು ಆಪಲ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀವ್ ಜಾಬ್ಸ್ ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಆಪಲ್‌ನ ಬೃಹತ್ 'ಆಪ್ ಸ್ಟೋರ್'ನಲ್ಲಿ 50 ಸಾವಿರ ಅಪ್ಲಿಕೇಷನ್‌ಗಳು ಲಭ್ಯವಿದ್ದು, ಐಫೋನ್ ಯಾರೂ ಮೀರಿಸಲಾರದಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಆಪಲ್ ಐಫೋನ್ 3ಜಿಎಸ್‌ನಲ್ಲಿರುವ ಸೌಲಭ್ಯಗಳು:- 3 ಜಿ ಐಫೋನ್‌ನಿಂದ ದುಪ್ಪಟ್ಟು ವೇಗದಲ್ಲಿ ಎಲ್ಲಾ ನಿರ್ವಹಣೆಗಳನ್ನು ಮಾಡಲು ಸಾಧ್ಯ.- ಯಾವುದೇ ಅಪ್ಲಿಕೇಷನ್‌ಗಳನ್ನು ಕ್ಷಣ ಮಾತ್ರದಲ್ಲಿ ತೆರೆಯಲು ಮತ್ತು ಕಾರ್ಯನಿರ್ವಹಿಸಲು ಸಾಧ್ಯವಿದೆ.- ವೆಬ್ ಪೇಜ್‌ಗಳನ್ನು ತೆರೆಯುವುದಕ್ಕೂ ಹೆಚ್ಚಿನ ಸಮಯ ಬೇಕಾಗಿಲ್ಲ.- ವಿಡಿಯೋಗಳನ್ನು ಚಿತ್ರೀಕರಿಸಿ ಎಡಿಟ್ ಅಥವಾ ಶೇರ್ ಕೂಡ ಮಾಡಬಹುದಾಗಿದೆ. ವಿಡಿಯೋಗಳನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಹಾಗೂ ಲಂಬ ಅಥವಾ ಯಾವುದೇ ಕೋನದಲ್ಲಿ ಸೆರೆ ಹಿಡಿಯಬಹುದು.- ವಿಡಿಯೋಗಳನ್ನು ಯೂ-ಟ್ಯೂಬ್‌ಗೆ ಅಪ್-ಲೋಡ್ ಕೂಡ ಮಾಡಬಹುದಾಗಿದೆ.- ಐಫೋನ್ 3 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಹೊಂದಿದ್ದು, ಛಾಯಾಚಿತ್ರ ಶ್ರೇಷ್ಠ ಗುಣಮಟ್ಟವನ್ನು ಹೊಂದಿರುತ್ತದೆ. ಅಟೋಫೋಕಸ್ ವಿಶೇಷ ವ್ಯವಸ್ಥೆಯೂ ಒಳಗೊಂಡಿದೆ.- ನಕ್ಷೆಗಳನ್ನು ಅಥವಾ ದಿಕ್ಸೂಚಿಗಳನ್ನು ತೋರಿಸುವ ವಿಶೇಷ ಸಾಫ್ಟ್‌ವೇರ್ ಕೂಡ ಇದರಲ್ಲಿದೆ.- ವೆಬ್‌ಸೈಟ್‌ಗಳಿಂದ ಅಥವಾ ಬೇರೆ ಬೇರೆ ಅಪ್ಲಿಕೇಶನ್‌ಗಳಿಂದ ಅಥವಾ ಯಾವುದೇ ಕಡೆಯಿಂದ ಟೆಸ್ಟ್ ಅಥವಾ ಫೋಟೋಗಳನ್ನು ಕಾಪಿ ಅಥವಾ ಪೇಸ್ಟ್ ಮಾಡಬಹುದಾಗಿದೆ.- ಕೀ ಬೋರ್ಡ್ ಲಂಬ ಅಥವಾ ನೇರ ಎರಡೂ ರೀತಿಯಲ್ಲಿ ಬಳಸಬಹುದಾಗಿದೆ. ಇದರಿಂದ ಸಂದೇಶಗಳು, ನೋಟ್ಸ್ ಅಥವಾ ಬ್ರೌಸಿಂಗ್‌ಗೆ ಹೆಚ್ಚಿನ ಅನುಕೂಲವಾಗುತ್ತದೆ.- ಉತ್ಕೃಷ್ಟ ಗುಣಮಟ್ಟದ ಸಂಗೀತವನ್ನು ಆಲಿಸಬಹುದಾಗಿದೆ. ಇದು ವಿಶೇಷ ಅನುಭವವನ್ನು ನೀಡುವಂತವುಗಳಾಗಿವೆ ಎಂದು ಕಂಪನಿ ಹೇಳಿಕೊಂಡಿದೆ.- ಐಫೋನ್ 3ಜಿಎಸ್ ಮಾದರಿಯು 16 ಜಿಬಿ ಮತ್ತು 32 ಜಿಬಿಗಳಲ್ಲಿ ಲಭ್ಯವಿದೆ. |