ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮುಂದಿನ ವರ್ಷ ಅಂತಾರಾಷ್ಟ್ರೀಯ ಯಂತ್ರೋಪಕರಣ ಮೇಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂದಿನ ವರ್ಷ ಅಂತಾರಾಷ್ಟ್ರೀಯ ಯಂತ್ರೋಪಕರಣ ಮೇಳ
ಅಂತಾರಾಷ್ಟ್ರೀಯ ಅಟೋ ಕಾಂಪೊನೆಂಟ್ಸ್ ಎಂಡ್ ಮೆಷಿನ್ ಟೂಲ್ಸ್ ಪ್ರದರ್ಶನದ ಒಂಬತ್ತನೇ ಆವೃತ್ತಿ 'ಎಸಿಎಂಇಇ 2010'ನ್ನು ಅಂಬತ್ತೂರು ಇಂಡಸ್ಟ್ರಿಯಲ್ ಎಸ್ಟೇಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಸೇಷನ್ (ಎಐಇಎಂಎ) ಮತ್ತು ಎಐಇಎಂಎ ಟೆಕ್ನಾಲಜಿ ಸೆಂಟರ್ (ಎಟಿಸಿ)ಯು ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ 2010ರ ಜೂನ್ 17ರಿಂದ 21ರವರೆಗೆ ಆಯೋಜಿಸಲಿವೆ.

ಅಭಿವೃದ್ಧಿಗಾಗಿ ಅವಕಾಶ ಎಂಬ ಪ್ರಮುಖ ಉದ್ದೇಶವನ್ನಿಟ್ಟುಕೊಂಡಿರುವ 'ಮೋಟಾರು ಬಿಡಿ ಭಾಗಗಳು ಮತ್ತು ಯಂತ್ರಗಳ ಸಲಕರಣೆಗಳ ಅಂತಾರಾಷ್ಟ್ರೀಯ ಪ್ರದರ್ಶನ'ವು ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುತ್ತಾ ಬಂದಿದೆ.
Ravi, ACMEE
WD

"25ಕ್ಕೂ ಹೆಚ್ಚು ದೇಶಗಳಿಂದ 500ರಷ್ಟು ಪ್ರತಿನಿಧಿಗಳನ್ನು ಈ ಮೇಳವು ಆಕರ್ಷಿಸಲಿದೆ. ಅದಕ್ಕಾಗಿ ಚೆನ್ನೈ ಟ್ರೇಡ್ ಸೆಂಟರ್‌ನ 18000 ಚದರ ಮೀಟರ್ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತದೆ. ನಾವು ಈಗ ನಿಗದಿ ಮಾಡಿರುವ ವ್ಯಾಪ್ತಿಯಲ್ಲಿ ಶೇಕಡಾ 35ನ್ನು ತುಂಬಬಹುದಾದಷ್ಟು ವಿವಿಧ ಕಂಪನಿಗಳ ನೋಂದಣಿಗಳನ್ನು ಸ್ವೀಕರಿಸಿದ್ದೇವೆ. ಪ್ರಸಕ್ತ ಆರ್ಥಿಕ ಹಿಂಜರಿತದ ಪರಿಸ್ಥಿತಿಯಲ್ಲೂ ನಾವು ಅತ್ಯುತ್ತಮ ಪ್ರೋತ್ಸಾಹವನ್ನೇ ಪಡೆದಿದ್ದೇವೆ. ಈ ಹಿಂದಿನ ನಮ್ಮ ಅನುಭವದ ಪ್ರಕಾರ ಹೇಳುವುದಾದರೆ ಈ ಪ್ರದರ್ಶನದಲ್ಲಿ 100 ಮಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚು ಮೊತ್ತದ ವ್ಯವಹಾರಗಳು ನಡೆಯಬಹುದು" ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ 'ಎಸಿಎಂಇಇ-2010'ರ ಅಧ್ಯಕ್ಷ ಡಿ. ರವಿ ತಿಳಿಸಿದ್ದಾರೆ.

ಪಾಶ್ಚಾತ್ಯ ರಾಷ್ಟ್ರಗಳಾದ ಚೀನಾ, ಜರ್ಮನಿ, ಇಟಲಿ, ದಕ್ಷಿಣ ಕೊರಿಯಾ, ತೈವಾನ್, ಟರ್ಕಿ, ಅಮೆರಿಕಾಗಳು ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ಅವುಗಳ ಜತೆ ಸ್ವಿಜರ್ಲೆಂಡ್, ಜಪಾನ್, ಇಸ್ರೇಲ್‌ಗಳು ಕೂಡ ಸೇರಿಕೊಳ್ಳುವ ನಿರೀಕ್ಷೆಗಳಿವೆ ಎಂದೂ ಅವರು ವಿವರಿಸಿದರು.

'ಎಸಿಎಂಇಇ-2010'ರ ಸಂಚಾಲಕ ಎಂ.ವಿ. ರಾಬರ್ಟ್ ಮಾತನಾಡುತ್ತಾ, "ಈ ಪ್ರದರ್ಶನವು ಮೋಟಾರು ವಾಹನಗಳ ಬಿಡಿ ಭಾಗಗಳು, ಯಂತ್ರಗಳಿಂದಾಗುವ ಹೆಚ್ಚಿನ ಉಪಯೋಗಗಳು, ಸಿಎನ್‌ಸಿ ಯಂತ್ರಗಳು, ಸಿಎನ್‌ಸಿ ಮತ್ತು ಪಿಎಲ್‌ಸಿ ಕಂಟ್ರೋಲ್ಸ್, ಕ್ಯಾಡ್/ಕ್ಯಾಮ್ ಸಿಸ್ಟಮ್ಸ್, ಸಲಕರಣೆಗಳು ಮತ್ತು ಬಿಡಿಭಾಗಗಳು, ಕೈಗಾರಿಕಾ ಸ್ವಯಂ ಯಂತ್ರಗಳು, ಗಾಳಿಯಂತ್ರಗಳು, ಸಲಕರಣೆಗಳು, ಅತೀ ಕಡಿಮೆ ಖರ್ಚಿನ ಯಂತ್ರಗಳು, ಮೋಟಾರ್ಸ್, ಯಂತ್ರಗಳು ಮತ್ತು ಯಂತ್ರಗಳ ಸಲಕರಣೆಗಳು, ವೆಲ್ಡಿಂಗ್ ಉಪಕರಣ, ಐಟಿ ಸೇವೆಗಳಿಗೆ ಸಂಬಂಧಪಟ್ಟಂತೆ ಕೇಂದ್ರೀಕೃತವಾಗಿದೆ" ಎಂದಿದ್ದಾರೆ.

ಭಾರತ ಸರಕಾರದ ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಸಚಿವಾಲಯ, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ ಹಾಗೂ ತಮಿಳುನಾಡು ಸಣ್ಣ ಕೈಗಾರಿಗೆಗಳ ಅಭಿವೃದ್ಧಿ ನಿಗಮ ಮತ್ತು ಇತರ ಸಂಸ್ಥೆಗಳು 'ಎಸಿಎಂಇಇ-2010'ಯನ್ನು ಬೆಂಬಲಿಸಲಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಳೆ ಕೊರತೆ: ದೇಶದ ಆರ್ಥಿಕತೆ ಮೇಲೆ ಹೊಡೆತ?
ಗುರ್‌ನಾನಿ ಈಗ 'ಮಹೀಂದ್ರಾ ಸತ್ಯಂ'ನ ನೂತನ ಸಿಇಓ
ಭಾರತಕ್ಕೂ ಬರಲಿದೆ ಆಪಲ್‌ 'ಐಫೋನ್ 3ಜಿಎಸ್'
2010ರಲ್ಲಿ ಮಾರುತಿ ಸಿಎನ್‌ಜಿ ಕಾರು ಮಾರುಕಟ್ಟೆಗೆ
ರೈಲ್ವೇಯಿಂದ ವೆಜಿಟೇಬಲ್ ಬಿರಿಯಾನಿ, ಫಿಶ್ ಕರಿ
ಒಂದು ಕಪ್ ನೀರಿನಿಂದ ಬಟ್ಟೆ ಒಗೆಯಬಹುದು..!