ಜಾಗತಿಕ ಕುಸಿತದ ಹಿನ್ನಲೆಯಲ್ಲಿ ಸ್ಥಳೀಯ ಬೇಡಿಕೆ ಕಡಿಮೆಯಾದ ಕಾರಣ ಮಂಗಳವಾರವೂ ಚಿನಿವಾರ ಪೇಟೆ ತೀವ್ರ ಕುಸಿತ ಕಂಡಿದೆ. ಪ್ರತಿ 10 ಗ್ರಾಮ್‌ಗಳಿಗೆ 45 ರೂಪಾಯಿಗಳಷ್ಟು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು 14,485 ರೂಪಾಯಿಗಳನ್ನು ತಲುಪಿದೆ.
ಆರ್ಥಿಕ ಹಿನ್ನಡೆಯ ಕಾರಣದಿಂದ ಕೈಗಾರಿಕಾ ವಲಯದಿಂದ ಬೇಡಿಕೆಯ ಕೊರತೆಯೆದುರಿಸಿದ ಕಾರಣ ಬೆಳ್ಳಿ ಬೆಲೆಯಲ್ಲೂ ಕುಸಿತವಾಗಿದೆ.
ಕಚ್ಚಾ ತೈಲಗಳ ಬೆಲೆಯೂ ಶೇಕಡಾ 4ರಷ್ಟು ಕುಸಿದಿದ್ದು, ಕಳೆದೆರಡು ವಾರಗಳಲ್ಲೇ ಇದು ಹೆಚ್ಚಿನದ್ದು ಎನ್ನಲಾಗಿದೆ. ಜಾಗತಿಕ ಆರ್ಥಿಕತೆಯು ಈ ವರ್ಷ ಶೇಕಡಾ 2.9ರಷ್ಟು ಕುಸಿತ ಕಾಣಲಿದೆ ಎಂದು ವಿಶ್ವಬ್ಯಾಂಕ್ ಮುನ್ಸೂಚನೆ ನೀಡಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನ ಕಾಮೆಕ್ಸ್ ಡಿವಿಜನ್‌ನಲ್ಲಿ ಚಿನ್ನದ ಆಗಸ್ಟ್ ವಿತರಣೆಯು ಒಂದು ಔನ್ಸ್‌ನಲ್ಲಿ 15.20 ಡಾಲರ್‌ನಷ್ಟು ಕುಸಿದು 921 ಡಾಲರ್ ತಲುಪಿದೆ. ಜುಲೈಯಲ್ಲೂ ಬೆಳ್ಳಿ 49.7 ಸೆಂಟ್ ಕುಸಿದು ಪ್ರತಿ ಔನ್ಸ್‌ಗೆ 13.703 ಡಾಲರ್ ತಲುಪಿತ್ತು.
ಸ್ಥಳೀಯ ಮಾರುಕಟ್ಟೆಯಲ್ಲಿ ಸ್ಟಾಂಡರ್ಡ್ ಚಿನ್ನ (99.5 ಪರಿಪೂರ್ಣ) ಪ್ರತಿ 10 ಗ್ರಾಂಗಳಿಗೆ 45 ರೂಪಾಯಿಗಳಷ್ಟು ಕುಸಿತ ಕಂಡಿದ್ದು 14,485 ರೂಪಾಯಿಗಳನ್ನು ಮುಟ್ಟಿದೆ.
ಶುದ್ಧ ಚಿನ್ನ (99.9 ಪರಿಪೂರ್ಣ) ಕೂಡ 10 ಗ್ರಾಂಗಳಿಗ 45 ರೂಪಾಯಿಗಳ ಕುಸಿತ ಕಂಡು 14,550ನ್ನು ತಲುಪಿದೆ. ಈ ಹಿಂದೆ 14,595 ರೂಪಾಯಿಗಳಲ್ಲಿತ್ತು.
ಸಿದ್ಧ ಬೆಳ್ಳಿ (.999) ಕಿಲೋವೊಂದಕ್ಕೆ 100 ರೂಪಾಯಿಗಳಂತೆ 22,650ರಿಂದ 22,550ಕ್ಕೆ ಸೋಮವಾರ ಕುಸಿದಿದೆ.
|