ನವದೆಹಲಿ: ಭಾರತದಲ್ಲಿ ಮಾನ್ಸೂನ್ ಮಳೆ ಪ್ರಸಕ್ತ ದುರ್ಬಲವಾಗಿದ್ದರೂ ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಬುಧವಾರ ಸರಕಾರ ಪ್ರತಿಕ್ರಿಯೆ ನೀಡಿದೆ. ಒಟ್ಟಾರೆ ಮಳೆಯ ಲೆಕ್ಕಾಚಾರಕ್ಕೆ ತೆಗೆದುಕೊಂಡಾಗ ಇನ್ನೂ ಶೇಕಡಾ 93ರಷ್ಟು ಮಳೆ ಬರಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಭೂವಿಜ್ಞಾನ ಸಚಿವ ಪೃಥ್ವಿರಾಜ್ ಚೌಹಾನ್ ತಿಳಿಸಿದ್ದಾರೆ. |