ರಾಜ್ಯದಲ್ಲಿ ಭತ್ತದ ಬೀಜ ಬಿತ್ತನೆಯ ಕಾಲವಾಗಿದ್ದರಿಂದ ಕೃಷಿಕರಿಗೆ ಹೆಚ್ಚಿನ ವಿದ್ಯುತ್ ಅಗತ್ಯವಾದ ಹಿನ್ನೆಲೆಯಲ್ಲಿ,ವಿದ್ಯುತ್ ಅಭಾವದ ಕಾರಣದಿಂದಾಗಿ ರಾಜ್ಯದ ಸರಕಾರಿ ಕಚೇರಿಗಳಲ್ಲಿ ಏರ್-ಕಂಡೀಶನರ್‌ಗಳ ಉಪಯೋಗವನ್ನು ಇಂದಿನಿಂದ ನಿಷೇಧಿಸಿ ಪಂಜಾಬ್ ಸರಕಾರ ಆದೇಶ ಹೊರಡಿಸಿದೆ.
ರೈತರು ಭತ್ತದ ಬೀಜಗಳನ್ನು ಕೃಷಿ ಮಾಡುತ್ತಿರುವ ಅವಧಿಯಲ್ಲಿ ನಿರಂತರ ಎಂಟು ಗಂಟೆಗಳ ಕಾಲ ವಿದ್ಯುತ ಸರಬರಾಜು ಮಾಡಲು ನಿರ್ಧರಿಸಿದ್ದರಿಂದ, ವಿದ್ಯುತ್ ಉಳಿತಾಯಕ್ಕಾಗಿ ಸರಕಾರಿ ಕಚೇರಿಗಳಲ್ಲಿ ಏರ್-ಕಂಡೀಶನರ್‌ಗಳ ಉಪಯೋಗವನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಲಾಗಿದೆ ಎಂದು ಸರಕಾರದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಹಾಗೂ ಮುಂಗಾರು ಮಳೆಯ ವಿಳಂಬದಿಂದಾಗಿ, ವಿದ್ಯುತ್ ಕೊರತೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ನಿಷೇಧದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಆದಾಗ್ಯೂ, ಸರಕಾರದ ನಿಷೇಧದ ಆದೇಶ ಜೂನ್30ರ ವರೆಗೆ ಮಾತ್ರ ಜಾರಿಯಲ್ಲಿದ್ದು, ಅಲ್ಲಿಯವರೆಗೆ ಮುಂಗಾರು ಮಳೆಯ ಆಗಮನವಾದಲ್ಲಿ ಗೃಹ , ವಾಣಿಜ್ಯ ಮತ್ತು ಕೃಷಿ ಕ್ಷೇತ್ರಗಳಿಗೆ ಅಗತ್ಯವಾದ ವಿದ್ಯುತ್ ಬಿಕ್ಕಟ್ಟು ಬಗೆಹರಿಯಲಿದೆ ಎಂದು ವಕ್ತಾರರು ಹೇಳಿದ್ದಾರೆ.
ಆದರೆ, ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ಜೂನ್ 30ರ ವರೆಗೆ ಬಗೆಹರಿಯದಿದ್ದಲ್ಲಿ ಏರ್-ಕಂಡೀಶನರ್‌ಗಳ ನಿಷೇಧವನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. |