ದೇಶದ ಸಾರ್ವಜನಿಕ ಕ್ಷೇತ್ರದ ನಂಬರ್ ಒನ್ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 50 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿ ಶೇ. 11.75ಕ್ಕೆ ಸೀಮಿತಗೊಳಿಸಿದ್ದರಿಂದ ಗೃಹ, ಕಾರು ಮತ್ತು ಕಾರ್ಪೋರೇಟ್ ಸಾಲಗಳು ಕಡಿಮೆ ಬಡ್ಡಿದರದಲ್ಲಿ ದೊರೆಯಲಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. ಪ್ರೈಮ್ ಲೆಂಡಿಂಗ್ ದರಗಳಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದ್ದು, ಜೂನ್ 29 ರಿಂದ ಜಾರಿಗೆ ಬರಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.ಬಿಪಿಎಲ್‌ಆರ್ ಪ್ರಸ್ತುತ ಶೇ.12.25 ರಷ್ಟಿದೆ.ಎಸ್‌ಬಿಐ ಬ್ಯಾಂಕ್ , ಪ್ರೈಮ್ ಲೆಂಡಿಂಗ್ ದರಗಳಲ್ಲಿ 75 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿ 2009 ಜನೆವರಿ 1 ರಿಂದ ಜಾರಿಗೆ ಬರುವಂತೆ ಕಳೆದ ಬಾರಿ ಕಡಿತ ಘೋಷಿಸಿತ್ತು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೇಸಿಸ್ ಪಾಯಿಂಟ್‌ಗಳಲ್ಲಿ ಕಡಿತ ಘೋಷಿಸಿದ್ದರಿಂದ, ದೇಶದ ಇತರ ಬ್ಯಾಂಕ್‌ಗಳು ಕೂಡಾ ಬೇಸಿಸ್ ಪಾಯಿಂಟ್‌ಗಳಲ್ಲಿ ಕಡಿತಗೊಳಿಸಿ, ಸಾಲಕ್ಕಾಗಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಉತ್ತೇಜಿಸಿದಂತಾಗುತ್ತದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.ಎಸ್‌ಬಿಐ ಬ್ಯಾಂಕ್ ಎಲ್ಲ ವಿಧದ ಠೇವಣಿ ಬಡ್ಡಿದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿ ಕಳೆದ ತಿಂಗಳು ಆದೇಶ ಹೊರಡಿಸಿತ್ತು.180 ದಿನಗಳ ಅವಧಿ ಅಥವಾ ಒಂದು ವರ್ಷದೊಳಗಿನ ಅವಧಿಗೆ ಬಡ್ಡಿ ದರವನ್ನು ಶೇ.6.50 ದಿಂದ ಶೇ.6.25ಕ್ಕೆ ಇಳಿಕೆ ಮಾಡಲಾಗಿದೆ.ಒಂದು ವರ್ಷದಿಂದ ಎರಡು ವರ್ಷದೊಳಗಿನ ಅವಧಿಯ ಬಡ್ಡಿ ದರವನ್ನು 7.25 ರಿಂದ ಶೇ.7ಕ್ಕೆ ಇಳಿಕೆ ಮಾಡಲಾಗಿದೆ.ಎರಡು ವರ್ಷಗಳಿಂದ 1ಸಾವಿರ ದಿನದೊಳಗಿನ ಅವಧಿಯ ಠೇವಣಿ ಬಡ್ಡಿ ದರವನ್ನು ಶೇ.7.50 ದಿಂದ ಶೇ.7.25ಕ್ಕೆ ಕಡಿತಗೊಳಿಸಲಾಗಿದೆ. ಒಂದು ಸಾವಿರ ದಿನ ಅವಧಿಯ ಠೇವಣಿ ಬಡ್ಡಿ ದರವನ್ನು ಶೇ.7.75 ರಿಂದ ಶೇ.7.50ಕ್ಕೆ ಇಳಿಕೆ ಮಾಡಲಾಗಿದೆ. ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಭೇಟಿ ಮಾಡಿ ಬಡ್ಡಿ ದರವನ್ನು ಕಡಿತಗೊಳಿಸುವಂತೆ ಮನವಿ ಮಾಡಿದ 15 ದಿನದೊಳಗಾಗಿ ಎಸ್‌ಬಿಐ ಬ್ಯಾಂಕ್ ಬಡ್ಡಿ ದರಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. |