ದ್ವಿದಳ ಧಾನ್ಯಗಳು, ದಿನಸಿ, ಹಾಲು ಹಾಗೂ ಫಲವಸ್ತುಗಳು ಮತ್ತು ತರಕಾರಿಗಳ ಬೆಲೆಯೇರಿಕೆಯಿಂದಾಗಿ ಹಣದುಬ್ಬರ ಏರಿಕೆ ಕಂಡಿದ್ದು ಕಳೆದ ವಾರದ ಪ್ರತಿಶತ (-)1.61ರಿಂದ ಶೇಕಡಾ 1.14ನ್ನು ತಲುಪಿದೆ.
ಸಗಟು ಸೂಚ್ಯಂಕ ದರವು ಕಳೆದ ವರ್ಷದ ಈ ತಿಂಗಳ ಅವಧಿಯಲ್ಲಿ 11.80ರಷ್ಟಿತ್ತು. ಈ ವರ್ಷದ ಮೇ ತಿಂಗಳ ಅಂತ್ಯದಲ್ಲಿ ಶೇಕಡಾ 0.13ರಷ್ಟಿದ್ದ ಹಣದುಬ್ಬರ ದರವು ಜುಲೈಯಲ್ಲಿ ತೀವ್ರವಾಗಿ ಕುಸಿದು ದಾಖಲೆಯನ್ನೇ ನಿರ್ಮಿಸಿತ್ತು. ಇದೀಗ ತುಸು ಸುಧಾರಿಕೆಯ ಹಾದಿಯಲ್ಲಿದೆ.
ಜೂನ್ 13ರ ವಾರಾಂತ್ಯದಲ್ಲಿ ಸೂಚ್ಯಂಕವು 234.2 ಅಂಕಗಳೊಂದಿಗಿತ್ತು. ಕಳೆದ ವರ್ಷದ ಇದೇ ವಾರದಲ್ಲಿ 236.9 ಅಂಕಗಳನ್ನು ಸೂಚ್ಯಂಕ ದಾಖಲಿಸಿತ್ತು.
ಕಳೆದ ವಾರಕ್ಕೆ ಹೋಲಿಸಿದರೆ ಇಂಧನ ಸೂಚ್ಯಂಕವು ಶೇಕಡಾ 0.4ರಷ್ಟು ಚೇತರಿಕೆ ಕಂಡಿದೆ. ಸಾಮಾನ್ಯ ಸರಕುಗಳ ದರವು ಶೇಕಡಾ 0.1ರಷ್ಟು ಹಾಗೂ ಉತ್ಪಾದನಾ ಸೂಚ್ಯಂಕವು ಶೇಕಡಾ 1ರಷ್ಟು ಏರಿಕೆಯಾಗಿದೆ.
|