ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರ್ ಇಂಡಿಯಾ ಬಿಕ್ಕಟ್ಟಿಗೀಗ ರಾಜಕೀಯ ಬಣ್ಣ..!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್ ಇಂಡಿಯಾ ಬಿಕ್ಕಟ್ಟಿಗೀಗ ರಾಜಕೀಯ ಬಣ್ಣ..!
ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಆರ್ಥಿಕ ಬಿಕ್ಕಟ್ಟು ಇದೀಗ ರಾಜಕೀಯ ಬಣ್ಣವನ್ನೂ ಪಡೆದುಕೊಳ್ಳುತ್ತಿದ್ದು, ಸಮಗ್ರ ತನಿಖೆ ನಡೆಸಬೇಕೆಂದು ಭಾರತೀಯ ಜನತಾ ಪಾರ್ಟಿ ಮತ್ತು ಶಿವಸೇನೆಗಳು ಗುರುವಾರ ಸರಕಾರವನ್ನು ಒತ್ತಾಯಿಸಿವೆ.

ಈ ಸಂಬಂಧ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್‌ರವರನ್ನು ಶಿವಸೇನೆ ಬೆಂಬಲಿತ ಸಂಘಟನೆಗಳು ಒತ್ತಾಯಿಸಿದ್ದರೆ, ಲೆಕ್ಕಾಧಿಕಾರಿ ಮತ್ತು ಪ್ರಧಾನ ಲೆಕ್ಕ ಪರಿಶೋಧಕ ಹಾಗೂ ಪ್ರಧಾನ ಜಾಗೃತ ಆಯೋಗಗಳು ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯ ವ್ಯವಹಾರಗಳನ್ನು ಪರಿಶೀಲನೆಗೊಳಪಡಿಸಬೇಕು ಎಂದು ಅದರ ಮಿತ್ರಪಕ್ಷ ಬಿಜೆಪಿಯು ಆಗ್ರಹಿಸಿದೆ.
Air India
PTI

"ವಿಮಾನಗಳ ಖರೀದಿಯಿಂದಾದ 55,000 ಕೋಟಿ ರೂಪಾಯಿಗಳ ಆರ್ಥಿಕ ಹೊರೆಯ ಬಗ್ಗೆ ಪ್ರಧಾನ ಲೆಕ್ಕ ಪರಿಶೋಧಕರು ಹಾಗೂ ಪ್ರಧಾನ ಜಾಗೃತ ಆಯೋಗವು ತನಿಖೆ ನಡೆಸಬೇಕಾದ ಅಗತ್ಯವಿದೆ. ಏರ್ ಇಂಡಿಯಾದ ಪ್ರಸಕ್ತ ಆರ್ಥಿಕ ಬಿಕ್ಕಟ್ಟಿಗೆ ಯುಪಿಎ ಸರಕಾರ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವೇ ಹೊಣೆ" ಎಂದು ಸಂಸದ ಹಾಗೂ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ಸಮಸ್ಯೆಗೆ ಕಾರಣವಾಗಿರುವ ನೈಜ ಅಂಶ ಬಡ್ಡಿ ಹೊರೆ, ಮರುಪಾವತಿ ಮತ್ತು ಅಧಿಕ ಖರ್ಚು-ವೆಚ್ಚಗಳು ಎಂದೂ ಇದೇ ಸಂದರ್ಭದಲ್ಲಿ ಅವರು ಆರೋಪಿಸಿದ್ದಾರೆ.

ಆರ್ಥಿಕ ಹಿಂಜರಿತದ ಕಾರಣದಿಂದ ಜಗತ್ತಿನ ಇತರ ವಿಮಾನಯಾನ ಸಂಸ್ಥೆಗಳು ವಿಮಾನ ಖರೀದಿಯನ್ನು ಸ್ಥಗಿತ ಅಥವಾ ರದ್ದು ಮಾಡಿದ ಹೊರತಾಗಿಯೂ ಏರ್ ಇಂಡಿಯಾವು ಈಗಲೂ ವಿಮಾನಗಳ ಖರೀದಿಗೆ ಮುಂದಾಗುತ್ತಿದೆ. ಇಲ್ಲಿ ನಡೆದಿರುವ ಖರೀದಿಗಳ ಬಗ್ಗೆ ಸಂಪೂರ್ಣ ಮರುಮೌಲ್ಯಪಾಪನ ನಡೆಸುವ ಅಗತ್ಯವಿದೆ ಎಂದು ಸೋಮಯ್ಯ ಬೊಟ್ಟು ಮಾಡಿದರು.

ಅದಕ್ಕೂ ಮೊದಲು ಏರ್ ಇಂಡಿಯಾದಲ್ಲಿನ ಶಿವಸೇನೆ ಬೆಂಬಲಿತ ಸಂಘಟನೆಗಳು ವಿಮಾನಯಾನ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಜಾದವ್‌ರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಲ್ಲದೆ, ಈ ವಿಚಾರದಲ್ಲಿ ಪ್ರಧಾನ ಮಂತ್ರಿಗಳು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದರು.

"ಏರ್ ಇಂಡಿಯಾ ಬಿಕ್ಕಟ್ಟಿನ ವಿವಾದದಲ್ಲಿ ಪ್ರಧಾನಿ ಮನಮೋಹನ್ ಸಿಂಗ್‌ರವರು ಮಧ್ಯ ಪ್ರವೇಶಿಸಬೇಕೆನ್ನುವುದು ನಮ್ಮ ತಕ್ಷಣದ ಬೇಡಿಕೆ" ಎಂದು ಶಿವಸೇನೆಯ ರಾಜ್ಯಸಭಾ ಸದಸ್ಯ ಹಾಗೂ ಏರ್ ಇಂಡಿಯಾ ಯೂನಿಯನ್ ಮುಖಂಡ ಭರತ್ ಕುಮಾರ್ ರಾವುದ್ ತಿಳಿಸಿದ್ದಾರೆ.

ಜಂಟಿ ಸಂಸದೀಯ ಸಮತಿ ಅಥವಾ ಸಂಸದೀಯ ಸಮಿತಿಯನ್ನು ಈ ಸಂಬಂಧ ತನಿಖೆ ನಡೆಸಲು ರಚಿಸಬೇಕೆಂದು ನಾವು ಕೂಡ ಸರಕಾರವನ್ನು ಆಗ್ರಹಿಸುತ್ತಿದ್ದೇವೆ. ಇದಕ್ಕೆ ಕಾರಣರಾಗಿರುವವರನ್ನು ಪತ್ತೆ ಹಚ್ಚುವುದು ಅಗತ್ಯ ಎಂದೂ ರಾವುತ್ ಒತ್ತಾಯಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರ್ನಾಟಕ ಸರಕಾರದಿಂದ ಸೌರಶಕ್ತಿ ಸ್ಥಾವರ ಯೋಜನೆ
ಹಣದುಬ್ಬರ ದರ ಏರಿಕೆ
'ಟಾಟಾ'ದಿಂದಲೂ ಜಿಎಸ್‌ಎಂ ಮೊಬೈಲ್ ಸೇವೆ
ಎಸ್‌ಬಿಐನಿಂದ ಬಡ್ಡಿ ದರ ಕಡಿತ: ಗೃಹ, ಕಾರು ಸಾಲ ಅಗ್ಗ
ಸರಕಾರಿ ಕಚೇರಿಗಳಲ್ಲಿ ಏರ್‌-ಕಂಡೀಶನರ್‌ ಉಪಯೋಗ ನಿಷೇಧ
ಕನಿಷ್ಠ ದರದ ಪ್ರಯಾಣಕ್ಕೆ ಏರ್‌ಇಂಡಿಯಾ