ಕಳೆದ ಆರ್ಥಿಕ ವರ್ಷದ ತೆರಿಗೆಗಳು ಹಾಗೂ ಜಾಗತಿಕ ಆರ್ಥಿಕ ಕುಸಿತದ ಕಾರಣ ತಾನು 25.05 ಬಿಲಿಯನ್ ರೂಪಾಯಿಗಳ (521.8 ಮಿಲಿಯನ್ ಡಾಲರ್) ನಷ್ಟ ಅನುಭವಿಸಿರುವುದಾಗಿ ಟಾಟಾ ಮೋಟಾರ್ಸ್ ಶುಕ್ರವಾರ ಪ್ರಕಟಿಸಿದೆ.
ತೆರಿಗೆಗಳ ಹೊರತಾಗಿಯೂ 21.61 ಬಿಲಿಯನ್ ರೂಪಾಯಿಗಳ (451 ಮಿಲಿಯನ್ ಡಾಲರ್) ಲಾಭ ದಾಖಲಿಸಿದ್ದ ಕಂಪನಿಯು ನಂತರದ ವರ್ಷದಲ್ಲಿ ಕುಸಿತಕ್ಕೊಳಗಾಗಿರುವುದನ್ನು ತನ್ನ ಹೇಳಿಕೆಯಲ್ಲಿ ಅದು ತಿಳಿಸಿದೆ.
2008-2009ನೇ ಸಾಲಿನಲ್ಲಿ ಟಾಟಾ ಮೋಟಾರ್ಸ್ 741.51 ಬಿಲಿಯನ್ ರೂಪಾಯಿಗಳ (15.44 ಬಿಲಿಯನ್ ಡಾಲರ್) ಆದಾಯ ಕ್ರೋಢೀಕರಿಸಿರುವುದಾಗಿ ವರದಿ ತಿಳಿಸಿದೆ. ಭಾರತದಲ್ಲಿ ಆರ್ಥಿಕ ವರ್ಷದ ಲೆಕ್ಕಾಚಾರವನ್ನು ಏಪ್ರಿಲ್ ಒಂದರಿಂದ ಮಾರ್ಚ್ 31ರವರೆಗೆ ಪರಿಗಣಿಸಲಾಗುತ್ತದೆ.
"ಜೂನ್ 2008ರಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಗಳಿಕೆಯನ್ನು 2007-08ರ ಕಂಪನಿಯ ಆರ್ಥಿಕ ವರ್ಷದ ಕ್ರೋಢೀಕರಣಕ್ಕೆ ಹೋಲಿಸಲಾಗದು" ಎಂದೂ ಅದು ತಿಳಿಸಿದೆ.
ಜಾಗ್ವಾರ್ ಲ್ಯಾಂಡ್ ರೋವರ್ 2007ರಲ್ಲಿ ಲಾಭ ತಂದಿತ್ತು ಮತ್ತು 2008ರ ಮಧ್ಯದವರೆಗೂ ಅದೇ ಪರಿಸ್ಥಿತಿ ಮುಂದುವರೆದಿತ್ತು ಎಂದು ಕಂಪನಿ ವಿವರಣೆ ನೀಡಿದೆ.
|