ಕೇಂದ್ರ ಸರಕಾರವು 22 ಹೊಸ ಟೀವಿ ಚಾನೆಲ್‌ಗಳಿಗೆ ಅನುಮತಿ ನೀಡುವುದರೊಂದಿಗೆ ದೇಶದಿಂದ ಪ್ರಸಾರವಾಗುವ ಒಟ್ಟು ವಾಹಿನಿಗಳ ಸಂಖ್ಯೆ 458ಕ್ಕೇರಿದೆ.
ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯವು ಶುಕ್ರವಾರ ಹೊಸ 22 ವಾಹಿನಿಗಳಿಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಈ ಇಲಾಖೆಯ ಸಚಿವೆಯಾಗಿ ಅಂಬಿಕಾ ಸೋನಿ ಅಧಿಕಾರವಹಿಸಿಕೊಳ್ಳುವ ಮೊದಲೇ ಇವುಗಳು ಅರ್ಜಿಗಳು ಬಂದಿತ್ತಾದರೂ ಇತ್ಯರ್ಥವಾಗಿರಲಿಲ್ಲ.
ಇದೀಗ ಅನುಮತಿ ನೀಡಿದ ನಂತರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿರುವ ಇಲಾಖೆಯು, "ಅಗತ್ಯ ನಿಬಂಧನೆಗಳಿಗೆ ಒಪ್ಪಿಕೊಂಡು ಸಲ್ಲಿಸಲಾಗಿರುವ ಎಲ್ಲಾ ಪ್ರಸ್ತಾವನೆಗಳಿಗೆ ಒಂದೇ ಬಾರಿಗೆ ಒಪ್ಪಿಗೆ ನೀಡಲಾಗಿದೆ" ಎಂದಿದೆ.
ಇವುಗಳಲ್ಲಿ ಟೀವಿ18 ಸಮೂಹದಿಂದ ಮೂರು, ಫಾಕ್ಸ್ ಚಾನೆಲ್ಸ್ ಇಂಡಿಯಾ ಗುಂಪಿನಿಂದ ನಾಲ್ಕು, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ ಕುಟುಂಬಸ್ಥರಿಂದ ಒಂದು, ಸಿನಿಮಾ ನಿರ್ಮಾಪಕ ಡಾ. ಎಸ್. ಕೃಷ್ಣಸ್ವಾಮಿಯವರಿಂದ ಒಂದು ಹೀಗೆ ಒಟ್ಟು 22 ಹೊಸ ಚಾನೆಲ್‌ಗಳು ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿವೆ.
'ಟೀವಿ 18' ಸಂಸ್ಥೆಯಿಂದ ಸಿಎನ್‌ಬಿಸಿ-ಟೀವಿ18 ಸೌತ್, ಸಿಎನ್‌ಬಿಸಿ-ಟೀವಿ18 ಗುಜರಾತ್ ಮತ್ತು ಸಿಎನ್‌ಬಿಸಿ-ಟೀವಿ18 ಚಾನೆಲ್ 3 ಎಂಬ ಮೂರು ಚಾನೆಲ್‌ಗಳು, ಫಾಕ್ಸ್‌ನವರಿಂದ ನ್ಯಾಷನಲ್ ಜಿಯೋಗ್ರಾಫಿಕ್ ಹೆಚ್‌ಡಿ ಚಾನೆಲ್, ನ್ಯಾಷನಲ್ ಜಿಯೋ ವೈಲ್ಡ್, ನ್ಯಾಷನಲ್ ಜಿಯೋ ಅಡ್ವೆಂಚರ್ ಮತ್ತು ನ್ಯಾಷನಲ್ ಜಿಯೋ ಮ್ಯೂಸಿಕ್ ಎಂಬ ನಾಲ್ಕು ಚಾನೆಲ್‌ಗಳು ಬರಲಿವೆ.
ಇನ್ಫಾರ್ಮೇಷನ್ ಟೀವಿ ಪ್ರೈವೆಟ್ ಲಿಮಿಟೆಡ್‌ನಿಂದ ಆಚವಮ್, ಸಮಾಜ್, ಮುಂಬೈ ನ್ಯೂಸ್ ಮತ್ತು ದಿಲ್ಲಿ ನ್ಯೂಸ್ ಎಂಬ ನಾಲ್ಕು ಚಾನೆಲ್‌ಗಳು, ಕಲೈನಾರ್ ಟೀವಿ ಸಂಸ್ಥೆಯಿಂದ ಕಲೈನಾರ್ ಏಷಿಯಾ, ಕೃಷ್ಣಸ್ವಾಮಿಯವರಿಂದ 'ಕೃಷ್ಣ ಟೀವಿ' ಮುಂತಾದ ವಾಹಿನಿಗಳಿಗೂ ಕೇಂದ್ರ ಸರಕಾರದಿಂದ ಹಸಿರು ನಿಶಾನೆ ದೊರೆತಿದೆ.
ರಾಜ್ ಟೆಲಿವಿಷನ್ ನೆಟ್‌ವರ್ಕ್ ಲಿಮಿಟೆಟ್‌ನಿಂದ 'ರಾಜ್ ಟೀವಿ ಏಷಿಯಾ', ಅಮೋದಾ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್‌ನಿಂದ 'ಎಬಿಎನ್ - ಆಂಧ್ರ ಜ್ಯೋತಿ', ಅನೋಲಿ ಹೋಲ್ಡಿಂಗ್ಸ್‌ನಿಂದ 'ಸಿಟಿ ಪಲ್ಸ್', ವೈಜಯಂತಿ ಟೆಲಿವೆಂಚರ್ಸ್‌ನಿಂದ 'ರಿದಮ್', ಪವಿತಾರ್ ಎಂಟರ್ಟೈನ್‌ಮೆಂಟ್, ಪ್ರೈಡ್ ಈಸ್ಟ್ ಎಂಟರ್ಟೈನ್‌ಮೆಂಟ್ಸ್‌ನಿಂದ 'ಇ ಲೈವ್', ಪ್ರಿಯಂದಾ ಮೀಡಿಯಾದಿಂದ 'ಅಪ್ನಾ ನ್ಯೂಸ್', ವೇದಿಕ್ ಬ್ರಾಡ್‌ಕಾಸ್ಟಿಂಗ್ ಲಿಮಿಟೆಡ್‌ನಿಂದ 'ವೇದಿಕ್', ರಾಮಾ ಅಸೋಸಿಯೇಷನ್ ಲಿಮಿಟೆಡ್‌ನಿಂದ 'ಫ್ರೆಶ್ ಟೀವಿ' ಚಾನೆಲ್‌ಗಳಿಗೆ ಅನುಮತಿ ನೀಡಲಾಗಿದೆ.
|