ದೇಶೀಯ ವಲಯದ ಆಯ್ದ ಸ್ಥಳಗಳಿಗೆ ಪ್ರಯಾಣಿಸಲು ಮಳೆಗಾಲದ ವಿಶೇಷ ರಿಯಾಯಿತಿ ದರಗಳನ್ನು ಪ್ರಕಟಿಸುವ ಮೂಲಕ ರಾಷ್ಟ್ರೀಯ ವಿಮಾನಯಾನ ಸಂಸ್ಥೆ 'ಏರ್ ಇಂಡಿಯಾ' ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಹಾದಿ ತುಳಿದಿದೆ.ಏರ್ ಇಂಡಿಯಾದ ಈ ಕೊಡುಗೆಗಳನ್ನು ಬಯಸುವವರು ಜೂನ್ 27ರಿಂದ ಜುಲೈ 3ರೊಳಗೆ ಖರೀದಿಸಬೇಕು. ಸೆಪ್ಟೆಂಬರ್ 10ರೊಳಗೆ ಪ್ರಯಾಣಿಸಲು ಅವಕಾಶವಿದೆ ಎಂದು ಕಂಪನಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಈ ಕೊಡುಗೆಯಲ್ಲಿ ಮುಂಬೈಯಿಂದ ದೆಹಲಿ ಅಥವಾ ಚೆನ್ನೈ ಅಥವಾ ಬೆಂಗಳೂರು ಅಥವಾ ಹೈದರಾಬಾದ್ಗೆ ಪ್ರಯಾಣಿಸಬಹುದಾಗಿದ್ದು, ಗ್ರಾಹಕ ಸೌಕರ್ಯ ಶುಲ್ಕದ ಹೊರತಾಗಿ ಕೇವಲ 2,479 ರೂಪಾಯಿಗಳನ್ನು ಮಾತ್ರ ತೆರಬೇಕಾಗುತ್ತದೆ ಎಂದು ಏರ್ ಇಂಡಿಯಾ ಪ್ರಕಟಿಸಿದೆ.ಇದೇ ರೀತಿ ಮುಂಬೈಯಿಂದ ಕೊಲ್ಕತ್ತಾಕ್ಕೂ ಪ್ರಯಾಣಿಸಬಹುದಾಗಿದ್ದು, 2,729 ರೂಪಾಯಿಗಳ ಮೊತ್ತ ನಿಗದಿಪಡಿಸಲಾಗಿದೆ. ದೆಹಲಿಯಿಂದ ಮುಂಬೈಗೆ ಮತ್ತು ಕೊಲ್ಕತ್ತಾಕ್ಕೆ 2,479 ರೂಪಾಯಿಗಳಿಗೆ ಪ್ರಯಾಣ ಮಾಡುವ ಸೌಕರ್ಯವನ್ನು ಏರ್ ಇಂಡಿಯಾ ಪ್ರಕಟಿಸಿದೆ.ದೆಹಲಿಯಿಂದ ಚೆನ್ನೈ, ಕೊಚ್ಚಿ, ಗುವಾಹತಿ ಮತ್ತು ಗೋವಾಗಳಿಗೆ ಪ್ರಯಾಣಿಸಬೇಕಾದರೆ 2,729 ರೂಪಾಯಿಗಳು ಹಾಗೂ ನಿಕಟ ನಿಲ್ದಾಣಗಳ ಪ್ರಯಾಣ ಮಾಡುವುದಾದಲ್ಲಿ 1979 ರೂಪಾಯಿಗಳನ್ನು ಮಾತ್ರ ವಿಧಿಸಲಾಗುತ್ತದೆ. |