ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) 50ಬೇಸಿಸ್ ಅಂಶಗಳನ್ನು ಸಾಲದ ಬಡ್ಡಿದರದಲ್ಲಿ ಕಡಿತ ಮಾಡಿ, ಶೇ.12.25ಕ್ಕೆ ಸ್ಥಿರಗೊಳಿಸಿದೆ.
ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಎಂ) ಹಾಗೂ ಐಡಿಬಿಐ ಬ್ಯಾಂಕುಗಳು ಬಡ್ಡಿದರ ಇಳಿಸಿದ ಕೂಡಲೇ ಎಸ್‌ಬಿಎಂ ಕೂಡ ಬಡ್ಡಿದರ ಕಡಿತಗೊಳಿಸಿದೆ. ಸಾಲದ ಬಡ್ಡಿದರದ ಜೊತೆಗೆ ಠೇವಣಿ ಮೇಲಿನ ಬಡ್ಡಿಯನ್ನೂ 25ಬೇಸಿಸ್ ಅಂಶಗಳಷ್ಟು ಕಡಿಮೆ ಮಾಡಲಾಗಿದೆ ಎಂದು ಎಸ್‌ಬಿಎಂ ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.
ಗುರುವಾರವಷ್ಟೇ ಐಡಿಬಿಐ ಬ್ಯಾಂಕ್ ಸಾಲದ ಬಡ್ಡಿದರವನ್ನು ಶೇ.12.75ಕ್ಕೆ ಇಳಿಸಿತ್ತು. ಎಸ್‌ಬಿಐ ಕೂಡ ಬಡ್ಡಿದರವನ್ನು ಶೇ.11.75ಕ್ಕೆ ಕಡಿತ ಮಾಡಿದ್ದನ್ನು ಸ್ಮರಿಸಬಹುದು. |