ದೇಶದ ಪ್ರತಿಷ್ಠಿತ ಕಾರು ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಜಾಗತಿಕವಾಗಿ ಹೆಸರು ಗಳಿಸಿರುವ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಾರನ್ನು ಭಾನುವಾರ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ' ಟಾಟಾ ಮೋಟಾರ್ಸ್ ಇತಿಹಾಸದಲ್ಲಿ ಇದು ಮರೆಯಲಾರದ ದಿನ' ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಭಾರತದಲ್ಲಿ ಉತ್ತಮ ಮಾರುಕಟ್ಟೆ ಪಡೆಯಲಿದೆ. ( ಈ ಹಿಂದೆ ಭಾರತದಲ್ಲಿಯೂ ಜೆಎಲ್‌ಆರ್ ಉತ್ತಮ ಮಾರುಕಟ್ಟೆ ಪಡೆದಿತ್ತು.) ಆದರೆ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜೆಎಲ್ಆರ್ ಮಾರಾಟ ನಿಂತುಹೋಗಿತ್ತು ಎಂದು ಟಾಟಾ ಗ್ರೂಪ್ ವರಿಷ್ಠ ರತನ್ ಟಾಟಾ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.ಆ ನಿಟ್ಟಿನಲ್ಲಿ ನಾವು ಭಾರತದಲ್ಲಿ ಈ ಎರಡೂ ಬ್ರ್ಯಾಂಡ್‌ಗಳ ಕಾರನ್ನು ಬಿಡುಗಡೆ ಮಾಡಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು. ಈ ಎರಡೂ ಬ್ರ್ಯಾಂಡ್ ಕಾರುಗಳನ್ನು ಚಲಾಯಿಸಲು ಭಾರತದ ಸಾರ್ವಜನಿಕರಿಗೊಂದು ಉತ್ತಮ ಅವಕಾಶ ದೊರೆತಂತಾಗಿದೆ. ಅಲ್ಲದೇ ಕಾರಿನ ಪ್ರದರ್ಶನ ಹಾಗೂ ಕಾರಿನ ಟೆಕ್ನಾಲಜಿ ಪರೀಕ್ಷೆಗೂ ಅವಕಾಶ ನೀಡಲಾಗುವುದು ಎಂದರು. |