ವೇತನ ವಿಳಂಬ ವಿರೋಧಿಸಿ ಮಂಗಳವಾರದಿಂದ ಕೆಲಸಕ್ಕೆ ಬಹಿಷ್ಕಾರ ಹಾಕಲು ನಿರ್ಧರಿಸಿರುವ ಏರ್ಇಂಡಿಯಾ ಕಾರ್ಮಿಕ ಸಂಘಟನೆಗಳು, ನಿರಂತರವಾಗಿ ಅಡಳಿತ ಮಂಡಳಿಯೊಂದಿಗೆ ಮಾತುಕತೆ ಮುಂದುವರಿಸಿವೆ.ಏರ್ಇಂಡಿಯಾ ಅಧ್ಯಕ್ಷ ಅರವಿಂದ್ ಜಾಧವ್ ಅವರೊಂದಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ಕೆಲ ವಾರಗಳಿಂದ ನಿರಂತರ ಮಾತುಕತೆಯನ್ನು ನಡೆಸುತ್ತಿದ್ದು, ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಏರ್ಇಂಡಿಯಾ ಸಂಸ್ಥೆಯ ವೆಚ್ಚ ಕಡಿತ ಹಾಗೂ ಉಳಿತಾಯ ಹೆಚ್ಚಿಸಲು ಕಾರ್ಮಿಕ ಮುಖಂಡರು ಅನೇಕ ಸಲಹೆಗಳನ್ನು ನೀಡಿದ್ದಾರೆ ಎಂದು ಏರ್ಇಂಡಿಯಾ ಮೂಲಗಳು ತಿಳಿಸಿವೆ.ಏರ್ಇಂಡಿಯಾ ಮುಖ್ಯಸ್ಥರೊಂದಿಗೆ ನಡೆದ ಮಾತುಕತೆಗಳು ನಿರ್ಧರವಿಲ್ಲದೇ ಅಂತ್ಯಗೊಂಡಿದ್ದು, ಮುಂಬರುವ ಕೆಲ ದಿನಗಳಲ್ಲಿ ಮತ್ತೆ ಸಭೆ ನಡೆಯಲಿದೆ ಎಂದು ಏವಿಯೇಶನ್ ಎಂಪ್ಲಾಯಿಸ್ ಗಿಲ್ಡ್ನ ಪ್ರಧಾನ ಕಾರ್ಯದರ್ಶಿ ಜಾರ್ಜ್ ಅಬ್ರಾಹಂ ಹೇಳಿದ್ದಾರೆ. |