ಸೋಮವಾರವೂ ಏಷಿಯನ್ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಮುಂದುವರಿದಿದ್ದು, ವಿಶ್ವದ ಅತಿ ದೊಡ್ಡ ಇಂಧನ ಬಳಕೆದಾರ ಅಮೆರಿಕಾದ ಆರ್ಥಿಕತೆ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್‌ನ ಪ್ರಮುಖ ಒಪ್ಪಂದ ಸಾದಾ ಕಚ್ಚಾ ತೈಲದ ಆಗಸ್ಟ್ ವಿತರಣೆಯಲ್ಲಿ 70 ಸೆಂಟ್ಸ್ ಕುಸಿದು ಪ್ರತೀ ಬ್ಯಾರೆಲ್‌ಗೆ 68.46 ಡಾಲರ್‌ಗೆ ಬಂದಿದ್ದರೆ, ಬ್ರೆಂಟ್ ನಾರ್ತ್ ಸೀ ಕ್ರೂಡ್‌ನ ಆಗಸ್ಟ್ ತಿಂಗಳಿಗಾಗಿನ ವಿತರಣೆಯು 68 ಸೆಂಟ್ಸ್‌ಗಳಷ್ಟು ಕುಸಿದು ಪ್ರತೀ ಬ್ಯಾರೆಲ್‌ಗೆ 68.24 ಡಾಲರುಗಳಾಗಿದ್ದವು.
ಈ ಎರಡೂ ಒಪ್ಪಂದಗಳು ಶುಕ್ರವಾರ ಸಂಕುಚಿತಗೊಂಡು ವ್ಯವಹಾರ ಮುಗಿಸಿದ್ದವು. "ಅಮೆರಿಕಾದಲ್ಲಿ ತೈಲದ ಬೇಡಿಕೆ ಕುಸಿದಿರುವ ಕಾರಣ ತೈಲ ಬೆಲೆಯು ತೀವ್ರ ಒತ್ತಡವನ್ನೆದುರಿಸುತ್ತಿದೆ" ಎಂದು ಸಿಂಗಾಪುರ ಮೂಲದ ವಿಶ್ಲೇಷಕ ವಿಕ್ಟರ್ ಶಾಮ್ ತಿಳಿಸಿದ್ದಾರೆ.
ಸರಕಾರದಿಂದ ಪ್ರಮುಖ ಆಸರೆ ದೊರೆತಿದ್ದ ಹಿನ್ನಲೆಯಲ್ಲಿ ಅಮೆರಿಕಾ ಗ್ರಾಹಕರ ಪ್ರಮಾಣವು ಏಪ್ರಿಲ್‌ನಿಂದ ಮೇ ವರೆಗೆ ಶೇಕಡಾ 0.3ರಷ್ಟೇ ಏರಿಕೆಯಾದ ವರದಿಯನ್ನು ಶುಕ್ರವಾರ ಅಧಿಕಾರಿಗಳು ಬಿಡುಗಡೆ ಮಾಡಿದ ನಂತರ ಅಮೆರಿಕಾ ಕಳೆದ ವಾರಾಂತ್ಯದ ವ್ಯವಹಾರದ ಅಂತಿಮ ಹಂತದಲ್ಲಿ ತೈಲ ಬೆಲೆ ಕುಸಿಯಿತು.
|