ಮುಂಗಾರು ಮಳೆ ವಿಫಲವಾಗದಿದ್ದರೆ ಸೆಪ್ಟೆಂಬರ್ ಹೊತ್ತಿಗೆ ಭಾರತೀಯ ಅರ್ಥವ್ಯವಸ್ಥೆ ಸುಧಾರಿಸಿಕೊಳ್ಳಲಿದ್ದು 2010ರ ಮಾರ್ಚ್ ಹಣಕಾಸು ವರ್ಷದಲ್ಲಿ ಪ್ರಗತಿ ದರ ಶೇಕಡಾ 7ನ್ನು ತಲುಪಲಿದೆ ಎಂದು ವಿಮಾ ಸಲಹೆಗಾರರು ಹೇಳಿದ್ದಾರೆ.
ಜಾಗತಿಕ ಕುಸಿತ ಮತ್ತು ದೇಶೀಯ ಬೇಡಿಕೆ ಮಂದಗತಿ ಹಿನ್ನಲೆಯಲ್ಲಿ ಬ್ಯಾಂಕ್ ಬಡ್ಡಿ ಸಾಲ ದರ ಏರಿಕೆಯು ಮುಂದುವರಿಯುತ್ತಿರುವುದು ಏಷಿಯಾದ ಮೂರನೇ ಅತಿ ದೊಡ್ಡ ಆರ್ಥಿಕ ಕ್ಷೇತ್ರಕ್ಕೆ ಚಿಂತೆಯ ವಿಷಯವಾಗಬಹುದು ಎಂದೂ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹೆಗಾರರ ಸಮಿತಿಯ ಅಧ್ಯಕ್ಷರಾಗಿರುವ ಸುರೇಶ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
"ಪಾಲಿಸಿ ದರಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ. ಇದು ಬ್ಯಾಂಕ್ ದರಗಳಲ್ಲಿ ಗೋಚರಿಸುತ್ತಿಲ್ಲ. ಅವರು ಈಗ ಹಂತ ಹಂತವಾಗಿ ಅದನ್ನು ಪಡೆಯುತ್ತಿದ್ದಾರೆ" ಎಂದು ಉದ್ಯಮ ಸಮಾವೇಶವೊಂದರಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ ತೆಂಡೂಲ್ಕರ್ ತಿಳಿಸಿದರು.
ಸಾಲದರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೆಂಟ್ರಲ್ ಬ್ಯಾಂಕ್ ಅಕ್ಟೋಬರ್ ಮತ್ತು ಏಪ್ರಿಲ್ ನಡುವಿನ ಪ್ರಮುಖ ಸಾಲದಲ್ಲಿ 425 ಮೂಲ ಅಂಕಗಳನ್ನು ಕಡಿತಗೊಳಿಸಿದೆ. ಆದರೆ ವಾಣಿಜ್ಯ ಬ್ಯಾಂಕ್‌ಗಳು ಇನ್ನಷ್ಟೇ ಇಂತಹ ದರಕಡಿತಗಳನ್ನು ಗಮನಿಸಬೇಕಿದೆ.
ಕಾರ್ಖಾನೆ ತೆರಿಗೆಗಳನ್ನು ಮೊಟಕುಗೊಳಿಸಿದ್ದ ಸರಕಾರ ಸಾರ್ವಜನಿಕ ಹೂಡಿಕೆಗೆ ಮುಂದಾಗುವ ಮೂಲಕ ಪ್ರಮುಖ ಆರ್ಥಿಕತೆಯನ್ನು ಮೇಲೆತ್ತರಿಸುವುದು ಸರಕಾರದ ಉದ್ದೇಶವಾಗಿತ್ತು. ಆದರೆ ಅಭಿವೃದ್ಧಿ ದರವು 2008/09ರ ಸಾಲಿನಲ್ಲಿ ಅದರ ಹಿಂದಿನ ಮೂರು ವರ್ಷಗಳ ಶೇಕಡಾ 9ರಿಂದ 6.7ಕ್ಕೆ ಕುಸಿತ ಕಂಡಿತ್ತು.
"ಸೆಪ್ಟೆಂಬರ್ ನಂತರವಷ್ಟೇ ಆರ್ಥಿಕತೆಯಲ್ಲಿನ ಪ್ರಗತಿ ಆರಂಭವಾಗಬಹುದು. ಮಳೆ ವೈಫಲ್ಯತೆ ಕಾಣದಿದ್ದರೆ ಅಭಿವೃದ್ಧಿ ದರವು ಕನಿಷ್ಠ ಶೇಕಡಾ ಏಳನ್ನು ತಲುಪಲಿದೆ" ಎಂದು ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
|