ಜಾಗತಿಕ ಮಾರುಕಟ್ಟೆ ದುರ್ಬಲ ಹಿನ್ನಲೆಯಲ್ಲಿ ದಾಸ್ತಾನುಗಾರರು ಮಾರಾಟವನ್ನು ನಿಲ್ಲಿಸದ ಕಾರಣ ಮತ್ತೆ ತಿರುಗಿ ಬಿದ್ದಿರುವ ಚಿನ್ನದ ದರವು ಹತ್ತು ಗ್ರಾಂಗಳಿಗೆ 20 ರೂಪಾಯಿಯ ಕುಸಿತ ಕಂಡಿದ್ದು 14,810 ರೂಪಾಯಿಗಳಿಗೆ ಇಳಿಕೆ ಕಂಡಿದೆ.
ಬೆಳ್ಳಿ ದರವೂ ಪ್ರತೀ ಕೆ.ಜಿ.ಯೊಂದಕ್ಕೆ 150 ರೂಪಾಯಿಗಳಂತೆ ಕುಸಿದಿದ್ದು, 22,550 ರೂಪಾಯಿಗಳನ್ನು ತಲುಪಿದೆ.
ವಿದೇಶಿ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ನಡುವೆಯೇ ದಾಸ್ತಾನುಗಾರರು ಮಾರಾಟವನ್ನು ಮುಂದುವರಿಸಿದ ಕಾರಣ ಪ್ರಮುಖವಾಗಿ ಚಿನ್ನದ ದರ ಕುಸಿತಕ್ಕೆ ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ.
ಲಂಡನ್ ಮಾರುಕಟ್ಟೆಯಲ್ಲಿ ಲೋಹ ದರವು ಒಂದು ಔನ್ಸ್‌ಗೆ 55 ಸೆಂಟ್ಸ್‌ಗಳಷ್ಟು ಕುಸಿದು 939.05 ಡಾಲರುಗಳನ್ನು ತಲುಪಿದ ವರದಿಗಳು ಬಂದಿವೆ.
ಮದುವೆ ಮತ್ತು ಹಬ್ಬ-ಹರಿದಿನಗಳ ಅವಧಿಯೂ ಇದಾಗಿಲ್ಲವಾಗಿರುವ ಕಾರಣ ಕೊಳ್ಳುವಿಕೆಯೂ ತೀವ್ರವಾಗಿ ಕ್ಷೀಣಿಸಿದೆ.
ಸ್ಟಾಂಡರ್ಡ್ ಚಿನ್ನ ಮತ್ತು ಆಭರಣಗಳ ಬೆಲೆಯು ಪ್ರತೀ 10 ಗ್ರಾಂಗಳಿಗೆ 20 ರೂಪಾಯಿ ಕುಸಿತ ಕಂಡಿದ್ದು ಕ್ರಮವಾಗಿ 14,810 ಮತ್ತು 14,660 ರೂಪಾಯಿಗಳಲ್ಲಿ ಬಂದು ನಿಂತಿದೆ.
ಅದೇ ಹೊತ್ತಿಗೆ ಪವನು ಬೆಲೆ ಪ್ರತೀ ಎಂಟು ಗ್ರಾಂಗಳಿಗೆ 12,400ರಲ್ಲೇ ಇದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಸಿದ್ಧ ಬೆಳ್ಳಿ ಮತ್ತು ವಾರವನ್ನಾಧರಿಸಿದ ವಿತರಣೆಯಲ್ಲೂ ಪ್ರತೀ ಕಿಲೋ ಗ್ರಾಂಗೆ 150 ರೂಪಾಯಿಗಳಂತೆ ಕುಸಿದಿದ್ದು, ಕ್ರಮವಾಗಿ 22,550 ಹಾಗೂ 22,450 ರೂಪಾಯಿಗಳಲ್ಲಿದೆ.
ಪ್ರತೀ 100 ಬೆಳ್ಳಿ ನಾಣ್ಯಗಳ ಬೆಲೆಯಲ್ಲೂ 100 ರೂಪಾಯಿ ಕುಸಿತ ಕಂಡಿದೆ. ಕೊಳ್ಳುವಿಕೆಗೆ 29,000 ಹಾಗೂ ಮಾರಾಟಕ್ಕೆ 29,100 ರೂಪಾಯಿಗಳು ಕಂಡು ಬಂದಿವೆ.
|