ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ 'ಶುಭ ಗೃಹ'ಕ್ಕಾಗಿ 1,300 ಅದೃಷ್ಟಶಾಲಿಗಳ ಆಯ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ 'ಶುಭ ಗೃಹ'ಕ್ಕಾಗಿ 1,300 ಅದೃಷ್ಟಶಾಲಿಗಳ ಆಯ್ಕೆ
ಅಗ್ಗದ ಮನೆ ನಿರ್ಮಿಸಿ ಕೊಡುವ ಯೋಜನೆ 'ಶುಭ ಗೃಹ'ಕ್ಕಾಗಿ ಮೊದಲ ಹಂತದ 1,300 ಅದೃಷ್ಟಶಾಲಿಗಳನ್ನು ಟಾಟಾ ಆಯ್ಕೆ ಮಾಡಿದೆ.

ಜಗತ್ತಿನಾದ್ಯಂತದಿಂದ ಸುಮಾರು 7,000 ಅರ್ಜಿಗಳನ್ನು ಟಾಟಾ ಹೌಸಿಂಗ್ ಡೆವಲಪ್‌ಮೆಂಟ್ ಕಂಪನಿ ಸ್ವೀಕರಿಸಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮೊದಲ ಹಂತದಲ್ಲಿ ಕಂಪನಿಯು ಮುಂಬೈಯ ಬೋಯಿಸಾರ್ ಸಮೀಪ ಫ್ಲ್ಯಾಟ್ ನಿರ್ಮಿಸಿ ವಿತರಿಸಲಿದೆ.

ಒಂದು ಕೋಣೆ ಹಾಗೂ ಅಡುಗೆ ಮನೆಯನ್ನೊಳಗೊಂಡ ಫ್ಲಾಟ್‌ಗೆ ನಾಲ್ಕು ಲಕ್ಷ ರೂಪಾಯಿಗಳೆಂದು ಟಾಟಾ ಮೇ ತಿಂಗಳಲ್ಲಿ ಘೋಷಿಸಿತ್ತು. ಈ ಸಂಬಂಧ ಅರ್ಜಿಗಳನ್ನು ನಂತರ ಸ್ವೀಕರಿಸಲಾಗಿತ್ತು. ಆಯ್ಕೆಯಾದ 24 ತಿಂಗಳುಗಳೊಳಗೆ ಮನೆ ಹಸ್ತಾಂತರಿಸುವ ಭರವಸೆಯನ್ನೂ ಟಾಟಾ ನೀಡಿದೆ.

ಇದೀಗ ಬಂದಿರುವ ಅರ್ಜಿಗಳಿಂದ ಕಂಪ್ಯೂಟರೀಕೃತ ಲಾಟರಿ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿದೆ. ಸುಧಾರಿತ ತಂತ್ರಾಶವನ್ನು ಹೆಸರುಗಳ ಆಯ್ಕೆಗೆ ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಒಂದು ಲಕ್ಷ ರೂಪಾಯಿಗಳ ನ್ಯಾನೋ ಕಾರಿನಿಂದ ಜಗತ್ತಿನ ಗಮನ ಸೆಳೆದಿದ್ದ ಟಾಟಾ ಕೆಲವೇ ತಿಂಗಳುಗಳ ನಂತರ ತನ್ನ ಅಗ್ಗದ ಫ್ಲ್ಯಾಟ್‌ಗಳ ಕುರಿತು ಪ್ರಕಟಣೆ ಹೊರಡಿಸಿ ರಿಯಲ್ ಎಸ್ಟೇಟ್ ವ್ಯವಹಾರಸ್ಥರ ನಿದ್ದೆಗೆಡಿಸಿತ್ತು.

ಟಾಟಾ ನಿರ್ಮಿಸುವ ಫ್ಲ್ಯಾಟ್‌ಗಳಲ್ಲಿ ಒಟ್ಟು ಎರಡು ಮಾದರಿಯ ಮನೆಗಳು ಲಭ್ಯವಿರುತ್ತದೆ. ಮೊದಲ ಮಾದರಿಯ ಮನೆಗೆ ಸುಮಾರು ನಾಲ್ಕು ಲಕ್ಷ ರೂಪಾಯಿಗಳು. ಎರಡನೇ ಮಾದರಿಯ ಮನೆಗೆ 6.7 ಲಕ್ಷ ರೂಪಾಯಿಗಳು. ಇದರಲ್ಲಿ ಒಂದು ಹಾಲ್, ಅಡುಗೆ ಕೋಣೆ ಹಾಗೂ ಒಂದು ಬೆಡ್ ರೂಂ ಇರಲಿದೆ. ಜತೆಗೆ ದೊಡ್ಡ ಮನೆಗಳೂ ಟಾಟಾದ ಪಟ್ಟಿಯಲ್ಲಿ ಇರಲಿವೆ. 10ರಿಂದ 15 ಲಕ್ಷ ರೂಪಾಯಿಗಳಷ್ಟು ದುಬಾರಿಯೆನಿಸಬಹುದಾದ ಮನೆಗಳಿವೆ ಎಂದು ಟಾಟಾ ಪ್ರಕಟಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸತ್ಯಂ' ಆಡಿಟಿಂಗ್ ಮಾಡಿದ್ದು ನಾವಲ್ಲ: ಪಿಡಬ್ಲ್ಯೂಸಿ
ಸತ್ಯಂ ಹಗರಣ: ಜು.9ಕ್ಕೆ ತನಿಖಾ ತಂಡದ ವರದಿ
ಎಲ್‌ಐಸಿ ಜೀವನ್ ಸಾಥಿ ಯೋಜನೆ
ಜಪಾನ್ ಪ್ರವಾಸಿ ವಿಸಾ
ಚಿನ್ನ ದರ ಮತ್ತೆ 20 ರೂಪಾಯಿ ಕುಸಿತ
ಮಳೆ ಬಂದರೆ ಅಭಿವೃದ್ಧಿ ದರ 7%: ಸಲಹೆಗಾರ