ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೊಡುಗೆ, ಹಿಂಜರಿತ: ಹಳಿ ತಪ್ಪಲಿದೆಯೇ ರೈಲ್ವೇ ಬಜೆಟ್?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಡುಗೆ, ಹಿಂಜರಿತ: ಹಳಿ ತಪ್ಪಲಿದೆಯೇ ರೈಲ್ವೇ ಬಜೆಟ್?
ದರಕಡಿತ, ಅನಿವಾರ್ಯ ವೇತನ ಹೆಚ್ಚಳ, ಆದಾಯ ಪ್ರಗತಿಯಲ್ಲಿ ಮಂದಗತಿ ಮತ್ತು ಉಚಿತ ಕೊಡುಗೆಗಳ ಪರಿಣಾಮದಿಂದ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಲಿರುವ ಆಯವ್ಯಯ ಪತ್ರವು ಕೊರತೆ ಬಜೆಟ್ ಆಗಲಿವೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಂದಾಜುಗಳ ಪ್ರಕಾರ, ಮಾಜಿ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಪ್ರಕಟಿಸಿದ್ದ ದರ ಕಡಿತ ಮತ್ತು ಆರನೇ ವೇತನ ಆಯೋಗದ ಪರಿಣಾಮದಿಂದಾಗಿ ವಾರ್ಷಿಕ 17,000 ಕೋಟಿ ರೂಪಾಯಿಗಳ ವಾರ್ಷಿಕ ನಷ್ಟ ದಾಖಲಾಗಲಿದೆ.

ಇದರ ಜತೆ ವಿದ್ಯಾರ್ಥಿಗಳಿಗೆ ಮತ್ತು ವೃದ್ಧರಿಗೆ ರಿಯಾಯಿತಿ ಪಾಸ್, ಪ್ರಯಾಣಿಕರಿಗೆ ಉತ್ಕೃಷ್ಟ ಗುಣಮಟ್ಟದ ಆಹಾರ ಮತ್ತು ಇತರ ಸವಲತ್ತುಗಳನ್ನು ಟಿಕೆಟ್ ದರ ಏರಿಸದೆಯೇ ಬ್ಯಾನರ್ಜಿ ನೀಡಲು ಮುಂದಾದರೆ ಒಟ್ಟು ವಿತ್ತೀಯ ಪರಿಣಾಮ ತೀರಾ ಹೀನಾಯವೆನಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
PR

100 ರೂಪಾಯಿ ಗಳಿಸಲು ಖರ್ಚು ಮಾಡಬೇಕಿರುವ ಹಣದ ನಿರ್ವಹಣಾ ಅನುಪಾತದ ಮಿತಿಯು, ಸಚಿವಾಲಯದ ಹಣಕಾಸು ಸ್ಥಿತಿಯ ಮೇಲಿರುವ ಒತ್ತಡಗಳು ಮತ್ತು ನಿರ್ಬಂಧಗಳನ್ನು ವಿವರಿಸುತ್ತದೆ.

"ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೇಯ ನಿರ್ವಹಣಾ ಅನುಪಾತವು ಶೇಕಡಾ 88.3 ರಷ್ಟಾಗುತ್ತದೆ ಎಂದು ಮಧ್ಯಂತರ ಬಜೆಟ್ ಈಗಾಗಲೇ ಮುನ್ಸೂಚನೆ ನೀಡಿದೆ" ಎಂದು ಇಲಾಖೆಯ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಉಚಿತ ಪಾಸುಗಳ ಕುರಿತು ಇದೇ ಧೋರಣೆ ಮುಂದುವರಿದಲ್ಲಿ, ಪ್ರಯಾಣದರವನ್ನೂ ಹೆಚ್ಚಳ ಮಾಡದೇ ಇದ್ದಲ್ಲಿ ಈ ಪ್ರಮಾಣವು ಶೇಕಡಾ 90ನ್ನೂ ಮೀರಬಹುದಾಗಿದೆ. ಇದು ಆದಾಯದ ಮೇಲೆ ಪರಿಣಾಮ ಬೀರಲಿದೆ" ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಪ್ರಸಕ್ತ ಇರುವ 'ತತ್ಕಾಲ್' ಯೋಜನೆ ಮತ್ತು ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ (ಐಆರ್‌ಸಿಟಿಸಿ) ಯ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಷ್ಕರಿಸುವುದಾಗಿ ಬ್ಯಾನರ್ಜಿ ಈಗಾಗಲೇ ಹೇಳಿಕೊಂಡಿದ್ದಾರೆ ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಆಹಾರ ಗುಣಮಟ್ಟ ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸುವುದಾಗಿಯೂ ತಿಳಿಸಿದ್ದಾರೆ.

"ನಮ್ಮ ಗುರಿ ಆದಾಯ ಮಾತ್ರವಲ್ಲ. ಸಾಮಾನ್ಯ ಜನರಿಗೆ ಸೌಲಭ್ಯಗಳು ಮತ್ತು ವ್ಯವಸ್ಥೆಗಳನ್ನು ಪೂರೈಸುವ ಜವಾಬ್ದಾರಿಯೂ ಇದೆ" ಎಂದು ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ್ದ ಬ್ಯಾನರ್ಜಿ ಜವಾಬ್ದಾರಿಯುತ ಮಾತುಗಳನ್ನಾಡಿದ್ದರು.

"ಇಲ್ಲೀಗ ಪ್ರಯಾಣಿಕರಿಗೆ ನೀಡಲಾಗುತ್ತಿರುವ ವ್ಯವಸ್ಥೆಗಳು ತೀರಾ ಕೀಳು ಮಟ್ಟದ್ದಾಗಿವೆ. ಕಳಪೆ ಗುಣಮಟ್ಟದ ಆಹಾರ, ಕೊಳೆಭರಿತ ರೈಲುಗಳು ಮತ್ತು ಶೌಚಾಲಯಗಳು, ಕುಡಿಯುವ ನೀರು ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಶುಚಿತ್ವದ ಕೊರತೆ ಮುಂತಾದ ಸಮಸ್ಯೆಗಳಿವೆ" ಎಂದು ಆಕೆ ಹೇಳಿದ್ದರು.

ರೈಲ್ವೇ ಸಚಿವರ ಈ ಹೇಳಿಕೆ ಹೊರತಾಗಿಯೂ ಇಲಾಖೆಯಲ್ಲಿನ ಪ್ರಸಕ್ತ ಸ್ಥಿತಿಯತ್ತ ಗಮನ ಹರಿಸುವ ರೈಲ್ವೇ ಮಂಡಳಿಯ ಸದಸ್ಯರೊಬ್ಬರು, "ಆರ್ಥಿಕ ಕುಸಿತದ ಕಾರಣ ಈ ವರ್ಷ ಸರಕು ಸಾಗಣೆಯಲ್ಲೂ ಹೆಚ್ಚಿನ ಗಳಿಕೆ ಸಾಧ್ಯವಾಗಿಲ್ಲ. ದರ ಕಡಿತವು 3,000 ಕೋಟಿ ರೂಪಾಯಿಗಳಷ್ಟು ಹೊರೆಯಾಗಿದೆ. ಇದಕ್ಕಿಂತಲೂ ಹೆಚ್ಚಾಗಿ ನಾವು ಆರನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ 14,000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಬೇಕಾಗಿದೆ" ಎಂದಿದ್ದಾರೆ.

ಕಳೆದ ವರ್ಷ ಸರಕು ಸಾಗಣೆಯಿಂದಾಗಿ ಸರಾಸರಿ ಎಂಟಕ್ಕಿಂತಲೂ ಹೆಚ್ಚು ಗಳಿಕೆ ಸಾಧ್ಯವಾಗಿತ್ತು. ಆದರೆ ಈ ವರ್ಷದ ಆರಂಭದ ಮೂರು ತಿಂಗಳಲ್ಲೇ ಗಳಿಕೆಯು ಪ್ರತಿಶತ ಮೂರರಷ್ಟು ಕುಸಿತ ಕಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗರಿಷ್ಠ ಉದ್ಯೋಗ ಬ್ಯಾಂಕುಗಳಿಂದ: ಸಮೀಕ್ಷೆ
ಡಾಲರ್ ಕುಸಿತ, ನೈಜೀರಿಯಾ ದಾಳಿ; ತೈಲ ಬೆಲೆಯೇರಿಕೆ
11,000 ಮಂದಿಗೆ ಜು.3ರಂದು ವೇತನ: ಏರ್ ಇಂಡಿಯಾ
ಟಾಟಾ 'ಶುಭ ಗೃಹ'ಕ್ಕಾಗಿ 1,300 ಅದೃಷ್ಟಶಾಲಿಗಳ ಆಯ್ಕೆ
'ಸತ್ಯಂ' ಆಡಿಟಿಂಗ್ ಮಾಡಿದ್ದು ನಾವಲ್ಲ: ಪಿಡಬ್ಲ್ಯೂಸಿ
ಸತ್ಯಂ ಹಗರಣ: ಜು.9ಕ್ಕೆ ತನಿಖಾ ತಂಡದ ವರದಿ