ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ನಾಲ್ಕು ರೂ. ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲಾಗಿದೆಯೆಂದು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವೋರಾ ತಿಳಿಸಿದ್ದಾರೆ. ಈ ಕುರಿತು ದೆಹಲಿಯ ಶಾಸ್ತ್ರಿಭವನದಲ್ಲಿ ಪತ್ರಿಕಾಗೋಷ್ಠಿ ಕರೆದ ದೇವೋರಾ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಹೆಚ್ಚಳವನ್ನು ಪ್ರಕಟಿಸಿದರು.
ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯಲ್ಲಿ ತೀವ್ರ ಕುಸಿತ ಉಂಟಾದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತಗ್ಗಿಸಿದೆವು. ಈಗ ಪುನಃ ಕಚ್ಚಾತೈಲದ ಬೆಲೆ ಏರಿಕೆಯಾಗಿದ್ದರಿಂದ ಪೆಟ್ರೋಲ್ ದರ ಲೀಟರ್‌ಗೆ 4 ರೂ. ಮತ್ತು ಡೀಸೆಲ್ ದರ 2 ರೂ. ಹೆಚ್ಚಳ ಮಾಡಿರುವುದಾಗಿ ಪ್ರಕಟಿಸಿದರು.
ಬೆಲೆ ಏರಿಕೆಯು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುತ್ತದೆಂದು ಅವರು ನುಡಿದಿದ್ದಾರೆ. ಅಡುಗೆಗೆ ಇಂಧನವಾಗಿ ಬಳಸುವ ಸೀಮೆಎಣ್ಣೆ ಮತ್ತು ಎಲ್‌ಪಿಜಿ ಅನಿಲದ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲವೆಂದೂ ಅವರು ಹೇಳಿದ್ದಾರೆ. |