ರೈಲ್ವೆ ಸೌಕರ್ಯ ಅಭಿವೃದ್ಧಿ ಮತ್ತು ರೈಲುಗಳಲ್ಲಿ ವಿತರಿಸುತ್ತಿರುವ ಅಹಾರ ಗುಣಮಟ್ಟದ ನಿರೀಕ್ಷೆಯ ಮದ್ಯೆಯು ಶುಕ್ರವಾರದಂದು ಜನಪರ ಬಜೆಟ್ ಮಂಡಿಸುವುದಾಗಿ ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರೈಲ್ವೆ ಬಜೆಟ್ ನಾಳೆ ಮಂಡಿಸಲಾಗುತ್ತಿದ್ದು, ಸರಳ, ಜನಸ್ನೇಹಿ ,ಜನಪರ ಬಜೆಟ್ ಆಗಿರುತ್ತದೆ ಎಂದು ತಿಳಿಸಿದ್ದಾರೆ.ಮಮತಾ ಬ್ಯಾನರ್ಜಿಗೆ ಹತ್ತಿರವಿರುವ ಮೂಲಗಳ ಪ್ರಕಾರ , ಮುಂಬರುವ ದಿನಗಳಲ್ಲಿ ಪ್ರಮುಖ ರೈಲು ಯೋಜನೆಗಳಲ್ಲಿ ಸಂಪನ್ಮೂಲಗಳನ್ನು ಹೆಚ್ಚಿಸುವ ದೂರದೃಷ್ಟಿಯನ್ನು ಹೊಂದಿದ್ದಾರೆ ಎಂದು ತಿಳಿಸಿವೆ.ಕಾಶ್ಮೀರ್‌ಕ್ಕೆ ರೈಲು ಲಿಂಕ್ ಜೋಡಣೆಗೆ ಬ್ಯಾನರ್ಜಿ ಅವರ ಅಜೆಂಡಾದಲ್ಲಿ ಪ್ರಮುಖ ಸ್ಥಾನಪಡೆದಿದ್ದು, ಯೋಜನೆಯನ್ನು ಫಾಸ್ಟ್ ಟ್ರ್ಯಾಕ್ ಅಡಿಯಲ್ಲಿ ಅವಧಿಗೆ ಮುನ್ನ ಮುಕ್ತಾಯಗೊಳಿಸುವ ಉದ್ದೇಶ ಹೊಂದಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.ರೈಲ್ವೆ ಇಲಾಖೆ ಯಾವಾಗಲು ದಯಾಮಯಾಗಿ ಬಡವರ ಜನಪರವಾಗಿರಬೇಕು. ಕೇವಲ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿರಬಾರದು ಎಂದು ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪ್ಯಾಸೆಂಜರ್ ದರಗಳಲ್ಲಿ ಅಲ್ಪ ಪರಿಷ್ಕರಣೆಯಾಗಲಿದ್ದು, ಸೂಪರ್‌ಫಾಸ್ಟ್ ದರಗಳಲ್ಲಿ ಕಡಿತವಾಗುವ ಸಾಧ್ಯತೆಗಳಿವೆ. ತತ್ಕಾಲ್ ಸ್ಕೀಮ್ ಜನಸ್ನೇಹಿಯಾಗಲು ಕೆಲ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಮಮತಾ ಘೋಷಿಸಿದ್ದಾರೆ. |