ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪೆಟ್ರೋಲ್ ಆಯ್ತು, ಇನ್ನಷ್ಟು ಬೆಲೆಯೇರಿಕೆಗೆ ಸಿದ್ಧರಾಗಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲ್ ಆಯ್ತು, ಇನ್ನಷ್ಟು ಬೆಲೆಯೇರಿಕೆಗೆ ಸಿದ್ಧರಾಗಿ!
ಪ್ರತೀ ಲೀಟರ್ ಪೆಟ್ರೋಲ್‌ಗೆ ನಾಲ್ಕು ಹಾಗೂ ಡೀಸೆಲ್‌ಗೆ ಎರಡು ರೂಪಾಯಿಗಳನ್ನೇರಿಸಿ ಗ್ರಾಹಕರ ಕಿಸೆಗೆ ಕತ್ತರಿ ಹಾಕಿದ್ದ ಸರಕಾರವೀಗ ಟ್ರಾನ್ಸ್‌ಪೋರ್ಟ್ ವೆಚ್ಚ ಏರಿಕೆಯ ಬಿಸಿಯನ್ನೆದುರಿಸುತ್ತಿದೆ. ಅಂದರೆ ಮುಂದಿನ ದಿನಗಳಲ್ಲಿ ಇದರ ಬಿಸಿ ಪ್ರತಿಯೊಬ್ಬರಿಗೂ ತಟ್ಟುವುದು ಖಚಿತ.

ಪೆಟ್ರೋಲ್ ದರ ಏರಿಕೆಯಾಗಿರುವುದರಿಂದ ನಿಮ್ಮ ಕಾರನ್ನೋಡಿಸುವುದು ದುಬಾರಿ ಎಂಬುದು ಈಗಾಗಲೇ ತಿಳಿದುಕೊಂಡಿರುವ ವಿಚಾರ. ಅದರ ಜತೆಗೆ ತರಕಾರಿ ಮತ್ತು ಆಹಾರ ಪದಾರ್ಥಗಳ ಬೆಲೆ ಕೂಡ ಗಗನಕ್ಕೇರಲಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಮಾತುಗಳು ಆಗಾಗ ಕೇಳಿ ಬಂದಿದ್ದರ ಉದ್ದೇಶ ಇಂಧನ ಮೇಲಿನ ತೆರಿಗೆಯನ್ನು ವಾಪಸು ಪಡೆಯಲು ಹಣಕಾಸು ಇಲಾಖೆಯ ಮನವೊಪ್ಪಿಸುವ ಗುರಿ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕಳೆದ ಏಳು ತಿಂಗಳಲ್ಲೇ ಗರಿಷ್ಠವೆನ್ನಬಹುದಾದ 73 ಡಾಲರುಗಳನ್ನು ತಲುಪಿದಾಗ ಆರ್ಥಿಕ ಕೊರತೆಯು ಮೇಲಕ್ಕೇರುತ್ತಿದೆ ಎಂದು ಹಣಕಾಸು ಇಲಾಖೆಯು ಚಿಂತಿತವಾಯಿತು. ಈ ಹಿನ್ನಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತವಾಯಿತು.

ಈ ಹಿಂದಿನಂತೆ ಈ ಬಾರಿಯೂ ಅಡುಗೆ ಅನಿಲ ಮತ್ತು ಸೀಮೆಎಣ್ಣೆ ದರವನ್ನು ಏರಿಸುವ ಗೋಜಿಗೆ ಹೋಗಲಾಗಿಲ್ಲ. ಆದರೆ ಟ್ರಕ್ ಮಾಲಕರು ಮತ್ತು ಟ್ರಾನ್ಸ್‌ಪೋರ್ಟರ್‌ಗಳು ಸರಕು ಸಾಗಣೆ ವೆಚ್ಚವು ತಮಗೆ ಹೊರಲಾಗದಷ್ಟು ಭಾರವಾಗುತ್ತಿದೆ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಎಫ್‌ಟಿಆರ್‌ಟಿಯು ಟ್ರಕ್ ಬಾಡಿಗೆಗಳು ಶೇಕಡಾ 3ರಿಂದ 4ರಷ್ಟು ಹೆಚ್ಚಾಗಲಿವೆ ಮತ್ತು ಚಿಲ್ಲರೆ ಸಾಗಣಿಕೆ ದರವು ಶೇಕಡಾ 20ರಿಂದ 25ರಷ್ಟು ಮೇಲಕ್ಕೇರಬಹುದು ಎಂದಿದೆ.

ದೆಹಲಿ ಮತ್ತು ಮುಂಬೈಯಂತಹ ನಗರಗಳಲ್ಲಿ ಸಿಎನ್‌ಜಿ ಮಾದರಿ ಇರುವುದರಿಂದ ಬಸ್ ಮತ್ತು ಟ್ಯಾಕ್ಸಿ ದರಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿಲ್ಲ.

ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ ಎದುರಾಗಿರುವ ಮೊದಲನೇ ಇಂಧನ ದರ ಏರಿಕೆಯಿದು. ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತೀ ಲೀಟರ್‌ಗೆ ಕ್ರಮವಾಗಿ 5 ಮತ್ತು 3 ರೂಪಾಯಿಗಳಂತೆ ಜೂನ್ 2008ರಲ್ಲಿ ಏರಿಸಿದ್ದೇ ಕೊನೆ. ಆ ನಂತರ ಇಂಧನ ಬೆಲೆ ಏರಿಕೆ ಕಂಡಿಲ್ಲ. ಡಿಸೆಂಬರ್ ಮತ್ತು ಜನವರಿ ಅವಧಿಯಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ ಕುಸಿತ ಕಂಡ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 10 ಮತ್ತು 4 ರೂಪಾಯಿಗಳ ಕಡಿತ ಪ್ರಕಟಿಸಲಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಹಾರ ಬೆಲೆ ಏರಿಕೆಯಿಂದ ಪ್ರಗತಿಗೆ ಅಡ್ಡಿ: ವಿತ್ತ ಸಮೀಕ್ಷೆ
ಮೇಲ್ತೆರಿಗೆ, ಸೆಸ್ ತೆಗೆಯಲು ಆರ್ಥಿಕ ಸಮೀಕ್ಷೆ ಶಿಫಾರಸು
ಮೂರನೇ ವಾರವೂ ಮುಂದುವರಿದ ಹಣದುಬ್ಬರ ಕುಸಿತ
ಜನಸ್ನೇಹಿ ಬಜೆಟ್ : ಮಮತಾ ಭರವಸೆ
ಪ್ರವಾಸೋದ್ಯಮ ಚೇತರಿಕೆಗೆ ಹೊಸ ಯೋಜನೆ
ಜನಪರ ಬಜೆಟ್: ಮಮತಾ ಭರವಸೆ