ಗುರುವಾರದ ದೇಶೀಯ ರೂಪಾಯಿಯ ಪ್ರಬಲತೆಯ ಕಾರಣದಿಂದ ಒತ್ತಡಕ್ಕೊಳಗಾಗಿರುವ ಚಿನಿವಾರ ಪೇಟೆಯು ಮುಂದಿನ ವಹಿವಾಟನ್ನು ಕಡಿಮೆ ಪ್ರಮಾಣದಲ್ಲಿ ನಡೆಸಬಹುದು ಮತ್ತು ಇದರಿಂದಾಗಿ ಡಾಲರ್ ಮೌಲ್ಯವು ಅಗ್ಗವಾಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ವ್ಯವಹಾರಸ್ಥರು ಅಮೆರಿಕಾದ ಉದ್ಯೋಗ ವರದಿಗಾಗಿ ಕಾಯುತ್ತಿದ್ದು, ಆರ್ಥಿಕ ಆರೋಗ್ಯದ ಅಂದಾಜಿನಲ್ಲಿದ್ದಾರೆ. ಇದರ ಆಧಾರದಲ್ಲಿ ಡಾಲರ್ ಮತ್ತು ಚಿನ್ನದ ಮೌಲ್ಯಗಳು ಸ್ಪಷ್ಟ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತವೆ ಎಂಬುದು ಅವರ ಲೆಕ್ಕಾಚಾರ.
ಬಹುತೇಕ ಕ್ರಿಯಾಶೀಲವಾಗಿರುವ ಆಗಸ್ಟ್ ತಿಂಗಳಿನ ವಿತರಣೆಯಲ್ಲಿ ಪ್ರತೀ 10 ಗ್ರಾಂಗಳಿಗೆ 14,514 ರೂಪಾಯಿಗಳಷ್ಟೇ ಕಂಡು ಬಂದು ಶೇಕಡಾ 0.24ರ ಕುಸಿತ ಬೆಳಿಗ್ಗೆ 11.15ಕ್ಕೆ ಕಂಡು ಬಂದಿತ್ತು. ಅದಕ್ಕೂ ಮೊದಲು ಡಾಲರ್ ಜಾಗತಿಕ ಕುಸಿತದಿಂದ ಶೇಕಡಾ 0.7ರ ಏರಿಕೆಯನ್ನು ಚಿನ್ನ ದಾಖಲಿಸಿತ್ತು.
ಇದು ಎರಡೂ ಬದಿಯಿಂದಲೂ ವ್ಯವಹರಿಸುವಂತೆ ಮಾಡುವ ರೀತಿಯಲ್ಲಿ ಸಾಗುತ್ತಿದೆ. ಆದರೆ ನಿರ್ದೇಶನ ಮಾಡಬಹುದಾದ ಅಮೆರಿಕಾದ ಉದ್ಯೋಗ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಕಾರ್ವಿ ಕಾಮ್‌ಟ್ರೇಡ್‌ನ ಉಪ ವ್ಯವಸ್ಥಾಪಕ ಅರಬಿಂದ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಅಂಜೆಲ್ ಕಾಮೊಡಿಟೀಸ್‌ನ ತಾಂತ್ರಿಕ ವಿಶ್ಲೇಷಕ ಅಭಿಷೇಕ್ ಚೌಹಾನ್ ಪ್ರಕಾರ ಚಿನ್ನ ಮುಂದಿನ ವ್ಯವಹಾರವು ಪ್ರತೀ 10 ಗ್ರಾಂಗಳಿಗೆ 14,450 ರೂಪಾಯಿಗಳಿಂದ 14,620 ರೂಪಾಯಿಗಳ ನಡುವೆಯಿರಬಹುದು.
|