ಸಣ್ಣ ಬೆಳೆಗಾರರ ವ್ಯಾಖ್ಯಾನವನ್ನು ಬದಲಿಸಬೇಕೆಂಬ ಕೋರಿಕೆ ಹಿನ್ನಲೆಯಲ್ಲಿ 1947ರ ರಬ್ಬರ್ ಕಾಯ್ದೆ ತಿದ್ದುಪಡಿಗೆ ಸರಕಾರ ಒಪ್ಪಿಗೆ ಸೂಚಿಸಿದ್ದು, ಮಸೂದೆಯನ್ನು ಮುಂಬರುವ ಸಂಸತ್ ಅಧಿವೇಶನ ಸಂದರ್ಭದಲ್ಲಿ ಮಂಡಿಸಲಿದೆ.
"1947ರ ರಬ್ಬರ್ ಕಾಯ್ದೆ ತಿದ್ದುಪಡಿಗೆ ಸಂಪುಟವು ಒಪ್ಪಿಗೆ ಸೂಚಿಸಿದೆ ಮತ್ತು ರಬ್ಬರ್ ತಿದ್ದುಪಡಿ ವಿಧೇಯಕ 2009ನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ" ಎಂದು ಕ್ಯಾಬಿನೆಟ್ ನಿರ್ಧಾರದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ವಿವರಿಸಿದರು.
10 ಹೆಕ್ಟೇರು ಅಥವಾ ಅದಕ್ಕಿಂತ ಕಡಿಮೆ ತೋಟ ಹೊಂದಿರುವವರನ್ನು ಸಣ್ಣ ಬೆಳೆಗಾರ ಎನ್ನಲಾಗುತ್ತಿತ್ತು. ಪ್ರಸಕ್ತ ತಿದ್ದುಪಡಿಯ ಪ್ರಕಾರ ಸಣ್ಣ ಬೆಳೆಗಾರ ಎಂಬ ವ್ಯಾಖ್ಯಾನವು 20 ಹೆಕ್ಟೇರು ಅಥವಾ ಅದಕ್ಕಿಂತ ಕಡಿಮೆ ಎಂದಾಗಲಿದೆ.
ವಿವಿಧ ಬಗೆಯ ರಬ್ಬರ್ ಮಾರುಕಟ್ಟೆಗೆ ಬಿಡುವಾಗ ಗುಣಮಟ್ಟ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲು ರಾಜ್ಯದ ರಬ್ಬರ್ ಮಂಡಳಿಗಳಿಗೆ ಈ ತಿದ್ದುಪಡಿಯು ಅಧಿಕಾರ ನೀಡಲಿದೆ ಎಂದೂ ಸೋನಿ ತಿಳಿಸಿದ್ದಾರೆ.
ಪ್ರಸಕ್ತ ಹೊಂದಿರುವ ಸಾಮಾನ್ಯ ನಿಧಿಯ ಜಾಗಕ್ಕೆ ರಬ್ಬರ್ ಅಭಿವೃದ್ಧಿ ನಿಧಿಯನ್ನು ಬದಲಿಯಾಗಿಡಲಾಗುತ್ತದೆ. ಇದರಿಂದಾಗಿ ರಬ್ಬರ್ ಮಂಡಳಿಯ ನಿಧಿ ಹೆಚ್ಚಿಸಲು ಪೂರಕ ಪ್ರೋತ್ಸಾಹವನ್ನು ನೀಡಲಿದೆ.
|