ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಜೆಟ್: ಕರ್ನಾಟಕಕ್ಕೆ ಬಂಪರ್; ಏಳು ಹೊಸ ರೈಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಜೆಟ್: ಕರ್ನಾಟಕಕ್ಕೆ ಬಂಪರ್; ಏಳು ಹೊಸ ರೈಲು
ದರ ಯಥಾಸ್ಥಿತಿ, ಮಂಗಳೂರು ಸೇರಿ ದೇಶದ 50 ನಿಲ್ದಾಣ ವಿಶ್ವದರ್ಜೆಗೆ
ನೂತನ ಏಳು ರೈಲುಗಳು, ಬೆಂಗಳೂರು, ಮಂಗಳೂರು ಮತ್ತು ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸುವುದು, ಹಲವು ಸೂಪರ್‌ಫಾಸ್ಟ್ ರೈಲುಗಳ ಘೋಷಣೆ ಸೇರಿದಂತೆ ಕರ್ನಾಟಕಕ್ಕೆ ಈ ಬಾರಿಯ ರೈಲ್ವೇ ಬಜೆಟ್ ಬಂಪರ್ ಕೊಡುಗೆ ನೀಡಿದಂತಾಗಿದೆ.

ಪ್ರಯಾಣ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು, ಅಂಚೆ ಕಚೇರಿಗಳಲ್ಲಿ ರೈಲ್ವೇ ಟಿಕೆಟ್, ದೇಶಾದ್ಯಂತ 50 ನಿಲ್ದಾಣಗಳು ವಿಶ್ವದರ್ಜೆಗೆ, ದೀರ್ಘ ದೂರದ ರೈಲುಗಳಲ್ಲಿ ಒಬ್ಬ ವೈದ್ಯರ ನಿಯೋಜನೆ, ಅಂಗವಿಕಲರಿಗೆ ವಿಶೇಷ ಕೋಚ್, ದೂರ ಪ್ರಯಾಣ ಮಾರ್ಗದಲ್ಲಿ ಐಟಿ ಸೇವೆ ಮುಂತಾದವು ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಶುಕ್ರವಾರ ಮಂಡಿಸಿದ ರೈಲ್ವೇ ಆಯವ್ಯಯ ಪತ್ರದ ಮುಖ್ಯಾಂಶಗಳು.

- ವಿಶ್ವದರ್ಜೆಗೇರಲಿರುವ ದೇಶದ 50 ರೈಲ್ವೇ ನಿಲ್ದಾಣಗಳಲ್ಲಿ ಕರ್ನಾಟಕದ ಮಂಗಳೂರು, ಬೆಂಗಳೂರು ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳುಸೇರಿದೆ. ಉಳಿದಂತೆ ಸಿಎಸ್‌ಟಿ ಮುಂಬೈ, ಪುಣೆ, ನಾಗ್ಪುರ, ಹೌರಾ, ಸೀಲ್ದಾಹ್, ನವದೆಹಲಿ, ಭುವನೇಶ್ವರ, ವಾರಣಾಸಿ, ಗುವಾಹತಿ, ಚೆನ್ನೈ, ತ್ರಿವೆಂಡ್ರಮ್ ಸೆಂಟ್ರಲ್, ತಿರುಪತಿ, ಅಹಮದಾಬಾದ್, ಭೋಪಾಲ್, ಆಗ್ರಾ, ಮಧುರಾ, ಚಂಡೀಗಢ, ನೂತನ ಜಲ್ಪಾಲ್ಗುರಿ, ಕೊಚಿನ್, ಪುರಿ ಮುಂತಾದ ನಿಲ್ದಾಣಗಳು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಲಿವೆ.

- ಮಂಗಳೂರು - ತಿರುವನಂತಪುರ, ಬೆಂಗಳೂರು - ಮಂಗಳೂರು - ಕಣ್ಣೂರು, ಮೈಸೂರು - ಯಶವಂತಪುರ, ಬೆಂಗಳೂರು - ಹುಬ್ಬಳ್ಳಿ - ಸೊಲ್ಲಾಪುರ, ಮಂಗಳೂರು - ಚೆನ್ನೈ - ಪುದುಚೇರಿ ನೂತನ ರೈಲು, ಹೌರಾ - ಬೆಂಗಳೂರು ನಡುವೆ ನೂತನ ರೈಲು ಸಂಚಾರ.

- ಅಮೇಠಿ - ಬೆಂಗಳೂರು, ಮುಂಬೈ-ಕಾರವಾರ, ಬೆಂಗಳೂರು - ಕೋಚ್‌ವೈಲಿ ನಡುವೆ ಸೂಪರ್‌ಫಾಸ್ಟ್ ರೈಲುಗಳ ಪರಿಚಯ.

- 49 ರೈಲ್ವೇ ನಿಲ್ದಾಣಗಳು ಉನ್ನತ ದರ್ಜೆಗೆ.

- ಪ್ರಯಾಣದರದಲ್ಲಿ ಯಾವುದೇ ಬದಲಾವಣೆಯಿಲ್ಲ.

- ದೇಶದ ಸುಮಾರು 500 ಅಂಚೆ ಕಚೇರಿಗಳಲ್ಲಿ ಕಂಪ್ಯೂಟರೀಕೃತ ರೈಲ್ವೇ ಟಿಕೆಟ್ ಸೌಲಭ್ಯ.

- 140 ರೈಲು ನಿಲ್ದಾಣಗಳಲ್ಲಿ ಮಹಿಳಾ ಕಮಾಂಡೋಗಳನ್ನು ನೇಮಿಸಿಕೊಳ್ಳುವುದು.

- ರೈಲು ಟಿಕೆಟುಗಳನ್ನು ಮಾರಾಟ ಮಾಡಲು ಸ್ಥಳೀಯ ಮಾರುಕಟ್ಟೆಯಲ್ಲಿ ಸಂಚಾರಿ ವಾಹನಗಳ ಪರಿಚಯ. ಆರಂಭದಲ್ಲಿ 50 ವಾಹನಗಳ ಪರಿಚಯ.

- ನಿಲ್ದಾಣ ಮತ್ತು ರೈಲುಗಳಲ್ಲಿ ಭದ್ರತೆಯೇ ಮೊದಲ ಆದ್ಯತೆ. ಎಲ್ಲಾ ವಿಭಾಗಗಳಲ್ಲೂ ಮಹಿಳೆಯರಿಗೆ ಆದ್ಯತೆ.

- ಅಂಗವಿಕಲರು, ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ.

- ಅಂಗವಿಕಲರಿಗೆ ವಿಶೇಷ ಕೋಚ್ ವ್ಯವಸ್ಥೆ.

- ದೂರ ಪ್ರಯಾಣ ಮಾರ್ಗದಲ್ಲಿ ವಿಶೇಷ ರಿಯಾಯಿತಿ.

- ರೈಲ್ವೇ ನಿಲ್ದಾಣಗಳಲ್ಲಿ ಸ್ವಚ್ಛತೆ, ಭದ್ರತೆಗೆ ಹೆಚ್ಚಿನ ಆದ್ಯತೆ.

- ರೈಲುಗಳಲ್ಲಿ ಪರಿಸರ ಸ್ನೇಹಿ ಶೌಚಾಲಯಗಳ ನಿರ್ಮಾಣ.

- ರೈಲಿನಲ್ಲಿ ಶುದ್ಧ ನೀರು, ಆಹಾರಕ್ಕೆ ಹೆಚ್ಚಿನ ಆದ್ಯತೆ.

- ಸ್ಥಳೀಯ ಆಹಾರ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನಿರ್ವಹಣೆ.

- ರಾಜಧಾನಿ, ಶತಾಬ್ಧಿ ರೈಲುಗಳಲ್ಲಿ ಮಾಹಿತಿ, ಮನರಂಜನೆ ಸೌಲಭ್ಯ.

- ಎಸ್‌ಎಂಎಸ್ ಮೂಲಕ ರೈಲ್ವೇ ಟಿಕೆಟ್ ಮಾಹಿತಿ ಸೇವೆ.

- ಇ-ಟಿಕೆಟ್ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸುವುದು.

- ದೂರ ಪ್ರಯಾಣದ ರೈಲುಗಳಲ್ಲಿ ವೈದ್ಯರ ಸೇವೆ.

- 375 ರೈಲ್ವೇ ನಿಲ್ದಾಣಗಳಲ್ಲಿ ವಿಶೇಷ ಸೌಲಭ್ಯ.

- 309 ರೈಲು ನಿಲ್ದಾಣಗಳನ್ನು ಮಾದರಿ ನಿಲ್ದಾಣಗಳನ್ನಾಗಿ ಪರಿವರ್ತನೆ.

- ನಿಲ್ದಾಣಗಳಲ್ಲಿ ಮಹಿಳೆಯರಿಗೆ ವಿಶೇಷ ವಿಶ್ರಾಂತಿ ಕೊಠಡಿ.

- 18,000 ಗೂಡ್ಸ್ ರೈಲು ಬೋಗಿಗಳ ಖರೀದಿಗೆ ಯೋಜನೆ.

- ಶೀಘ್ರದಲ್ಲೇ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ.

- ದೇಶಾದ್ಯಂತ 3,000 ಟರ್ಮಿನಲ್‌ಗಳ ಸ್ಥಾಪನೆ.

- ಹೊಸ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಒತ್ತು.

- ಹೆಚ್ಚಿನ ರೈಲು ನಿಲ್ದಾಣಗಳಲ್ಲಿ ಟಿಕೆಟ್ ವಿತರಣಾ ಯಂತ್ರಗಳ ಅಳವಡಿಕೆಗೆ ಕ್ರಮ.

- ಖಾಸಗಿ ಸಹಭಾಗಿತ್ವದಲ್ಲಿ ನಿಲ್ದಾಣಗಳ ಪ್ರಗತಿ.

- ರೈತರಿಗೆ ವಿಶೇಷ ರೈಲು ವ್ಯವಸ್ಥೆ

- ರಾಯ್‌ಬರೇಲಿಯಲ್ಲಿ ಬೋಗಿ ಕಾರ್ಖಾನೆ.

- ಹೊಸ ರೈಲ್ವೇ ಕೋಚ್ ಕಾರ್ಖಾನೆ ಸ್ಥಾಪನೆ.

- ಕಡಿಮೆ ಆದಾಯದ ಪ್ರಯಾಣಿಕರಿಗೆ 'ಯುವ' ರೈಲು.

- ತತ್ಕಾಲ್ ಕಾಯ್ದಿರಿಸುವ ಸೌಲಭ್ಯ ಎರಡು ದಿನಗಳಿಗೆ ಇಳಿಕೆ ಮತ್ತು ದರದಲ್ಲಿ ಕಡಿತ.

- ರೈಲ್ವೇ ಸರಕು ಸಾಗಣೆ ವ್ಯಾಪ್ತಿ ಹೆಚ್ಚಳ.

- ತೋಟಗಾರಿಕಾ ಬೆಳೆಗಳಿಗಾಗಿ ಶೀತಲೀಕರಣ ವ್ಯವಸ್ಥೆ.

- ರೈಲು ನಿಲ್ದಾಣಗಳಲ್ಲಿ ಇನ್ನಷ್ಟು ವಾಣಿಜ್ಯ ಸಂಕೀರ್ಣಗಳ ನಿರ್ಮಾಣ.

- ಕೊಲ್ಕತ್ತಾ, ಚೆನ್ನೈ, ದೆಹಲಿಯಲ್ಲಿ ಮಹಿಳೆಯರಿಗಾಗಿ ವಿಶೇಷ ರೈಲು.

- ರೈಲುಗಳಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಶೇಕಡಾ 30ರಿಂದ 50ರಷ್ಟು ವಿಶೇಷ ರಿಯಾಯಿತಿ.

- ಚೆನ್ನೈ-ದೆಹಲಿ, ಹೌರಾ-ಕೊಲ್ಕತ್ತಾ ಎಕ್ಸ್‌ಪ್ರೆಸ್ ರೈಲು.

- ಪ್ರಯಾಣಿಕರಿಗೆ 'ಜನತಾ ಖಾನಾ' ವಿಶೇಷ ಯೋಜನೆ.

- ದೇಶಾದ್ಯಂತ 67 ನೂತನ ರೈಲುಗಳ ಘೋಷಣೆ.

- 12 ನೂತನ ತಡೆರಹಿತ 'ತುರಂತ್' ರೈಲು ಆರಂಭ.

- ಅಸಂಘಟಿತ ವಲಯದವರಿಗೆ ಮಾಸಿಕ 25 ರೂಪಾಯಿ ಪಾಸ್.

- ಪ್ರಮುಖ ನಿಲ್ದಾಣಗಳ ಬಳಿ ಕಾಲೇಜು ಸ್ಥಾಪನೆ.

- ಪೂರ್ಣ ಪ್ರಮಾಣದ ರೈಲ್ವೇ ಕಾರಿಡಾರುಗಳ ನಿರ್ಮಾಣ.

- ಚೆನ್ನೈ- ದೆಹಲಿ, ಪುಣೆ-ದೆಹಲಿ, ಹೌರಾ-ದೆಹಲಿ ಸೇರಿದಂತೆ 12 ತಡೆರಹಿತ ರೈಲು.

- ರೈಲ್ವೇ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು.

- ರೈಲ್ವೇ ಉದ್ಯೋಗಿಗಳ ಹೆಣ್ಣು ಮಕ್ಕಳಿಗೆ ಮತ್ತು 'ಡಿ' ದರ್ಜೆಯ ಎಲ್ಲಾ ಉದ್ಯೋಗಿಗಳ ಮಕ್ಕಳಿಗೆ ಸ್ಕಾಲರ್‌ಶಿಪ್.

- ಬಿಲಾಸ್ಪುರ್, ನಾಗ್ಪುರ್, ಭೋಪಾಲ್, ತಿರುವನಂತಪುರ, ಹಾಜಿಪುರ, ಅಹಮದಾಬಾದ್‌ಗಳಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಮ್ ಆದ್ಮಿಗೆ ದರ ಏರಿಕೆ ಇಲ್ಲದ ಮಮತೆಯ ಬಜೆಟ್
ಅಂತಾರಾಷ್ಟ್ರೀಯ ಯುನಿವರ್ಸಿಟಿಗೆ ಭಾರತ ಒಪ್ಪಿಗೆ
ರಬ್ಬರ್ ಕಾಯ್ದೆ ತಿದ್ದುಪಡಿಗೆ ಸರಕಾರ ಒಪ್ಪಿಗೆ
ಅಡುಗೆ ಅನಿಲ ಕೊರತೆ ಇಲ್ಲ: ಕೇಂದ್ರ
ಇಂದು ರೈಲ್ವೆ ಬಜೆಟ್: ರಾಜ್ಯಕ್ಕೆ ವರದಾನವಾಗಲಿದೆಯೇ?
ತೆರಿಗೆ ವಿನಾಯ್ತಿ ಸುಸ್ಥಿತಿಗೆ ಸಹಕಾರಿ ಬ್ಯಾಂಕ್‌ಗಳ ಆಗ್ರಹ