ಲಂಡನ್‌ನ ಹೆಚ್ಚಿದ ಸಲಹೆಗಳಿಂದಾಗಿ ಹೂಡಿಕೆದಾರರು ನಿರಂತರ ವ್ಯವಹಾರದಲ್ಲಿ ಮಗ್ನರಾದ ಕಾರಣ ಶನಿವಾರ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಕುಸಿತವನ್ನು ಕಂಡಿದೆ.
ಅದೇ ಹೊತ್ತಿಗೆ ಉದ್ಯಮದ ಸಾಧಾರಣ ಬೇಡಿಕೆ ಹಿನ್ನಲೆಯಲ್ಲಿ ಬೆಳ್ಳಿ ದರ ತುಸು ಚೇತರಿಕೆ ಕಂಡಿದೆ. "ಚಿನ್ನದ ಬೆಲೆ ಕುಸಿತದಲ್ಲಿ ಮದುವೆ ಸಮಾರಂಭಗಳ ಅವಧಿ ಮುಗಿದಿರುವುದರ ಪಾತ್ರವೂ ಇದೆ" ಎಂದು ವ್ಯಾಪಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲಿ ಸ್ಟಾಂಡರ್ಸ್ ಚಿನ್ನಕ್ಕೆ (99.5 ಶುದ್ಧ) ಪ್ರತೀ 10 ಗ್ರಾಂನಲ್ಲಿ 15 ರೂಪಾಯಿಗಳ ಕುಸಿತ ಕಂಡಿದ್ದು 14,455 ರೂಪಾಯಿಗಳನ್ನು ತಲುಪಿದೆ. ನಿನ್ನೆ ವ್ಯವಹಾರ ಮುಕ್ತಾಯಗೊಳ್ಳುವಾಗ 14,470 ರೂ.ಗಳಾಗಿತ್ತು.
ಶುದ್ಧ ಚಿನ್ನ (99.9 ಶುದ್ಧ)ದ ಬೆಲೆಯಲ್ಲೂ ಕುಸಿತ ಕಂಡಿದೆ. ನಿನ್ನೆಯ ವ್ಯವಹಾರದಲ್ಲಿ ದಾಖಲಿಸಿದ್ದ 14,540ರಿಂದ ಇಂದು 14,525ಕ್ಕೆ ಕುಸಿತವಾಗಿದೆ.
ಸಿದ್ಧ ಬೆಳ್ಳಿ (.999 ಉತ್ಕೃಷ್ಟ) ದರವು ಪ್ರತೀ ಕಿಲೋವೊಂದಕ್ಕೆ 15 ರೂಪಾಯಿಗಳ ಏರಿಕೆ ಕಂಡಿದ್ದು ನಿನ್ನೆಯ 21,985ರಿಂದ 22,000 ರೂಪಾಯಿಗಳನ್ನು ಇಂದಿನ ವ್ಯವಹಾರ ದಾಖಲಿಸಿತು.
|