ಅಮೆರಿಕಾದ ನಿರುದ್ಯೋಗ ವರದಿ ಹೊರ ಬರುತ್ತಿದ್ದಂತೆಯೇ ವಿಶ್ವದ ಬೃಹತ್ ಆರ್ಥಿಕ ಕ್ಷೇತ್ರ ಸದ್ಯದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲದಿರುವುದನ್ನು ಮನಗಂಡ ಏಷಿಯನ್ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಸೋಮವಾರ ಭಾರೀ ಕುಸಿತ ಕಂಡಿದೆ.
ನ್ಯೂಯಾರ್ಕ್ ಪ್ರಧಾನ ಕರಾರಿನಲ್ಲಿ ಮುಂಜಾನೆ ವ್ಯವಹಾರ ಸಾದಾ ಕಚ್ಚಾ ತೈಲದ ಆಗಸ್ಟ್ ವಿತರಣೆಯು 1.89 ಡಾಲರ್ ಕುಸಿತ ಕಂಡು ಪ್ರತೀ ಬ್ಯಾರೆಲ್‌ಗೆ 64.84 ಡಾಲರುಗಳಿಗಿಳಿದಿದೆ.
ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲದ ಆಗಸ್ಟ್ ವಿತರಣೆ ಕೂಡ ಕುಸಿತ ಕಂಡಿದೆ. ಪ್ರತೀ ಬ್ಯಾರೆಲ್‌ಗೆ 1.01 ಡಾಲರ್ ಕುಸಿದು 64.60 ಡಾಲರುಗಳನ್ನು ತಲುಪಿದೆ.
ಕಳೆದ ಮಂಗಳವಾರವಷ್ಟೇ ಈ ವರ್ಷದ ಅತ್ಯಧಿಕ ಬೆಲೆ 73 ಡಾಲರ್ ಪ್ರತೀ ಬ್ಯಾರೆಲ್‌ಗೆ ದಾಖಲಿಸಿದ್ದ ಕಚ್ಚಾ ತೈಲ ಬೆಲೆಯ ಎರಡೂ ಕರಾರುಗಳಲ್ಲಿ ಈಗ ಕುಸಿತವಾಗಿದೆ.
"ಅಮೆರಿಕಾದಲ್ಲಿನ ಉದ್ಯೋಗ ಕೊರತೆಯ ವರದಿಯನ್ನಾಧರಿಸಿ ಕಳೆದ ವಾರದ ದರದಿಂದ ತೈಲ ಬೆಲೆಯಲ್ಲಿ ಕುಸಿತ ಕಾಣುತ್ತಿದೆ" ಎಂದು ಟೋಕಿಯೋದ ಮಿತ್ಸುಬಿಶಿ ಅಧಿಕಾರಿ ಟೋನಿ ನೂನಾನ್ ತಿಳಿಸಿದ್ದಾರೆ.
ಅಮೆರಿಕಾದಲ್ಲಿನ ನಿರುದ್ಯೋಗ ಸಮಸ್ಯೆಯು ಅಂದಾಜು ಮಾಡಿದ್ದ ಗಡಿಯನ್ನೂ ಮೀರಿದ ವರದಿಯನ್ನು ಅಮೆರಿಕಾ ಕಾರ್ಮಿಕರ ಇಲಾಖೆಯು ಕಳೆದ ವಾರ ಬಿಡುಗಡೆ ಮಾಡಿತ್ತು. ಈ ವರದಿಯಲ್ಲಿ ಜೂನ್ ತಿಂಗಳಲ್ಲಿ 467,000 ಉದ್ಯೋಗ ನಷ್ಟದ ಲೆಕ್ಕಾಚಾರವನ್ನು ತೋರಿಸಲಾಗಿತ್ತು. ಇದು 26 ವರ್ಷಗಳಲ್ಲೇ ಅತ್ಯಧಿಕ ಅಂದರೆ ಶೇಕಡಾ 9.5 ಎಂದು ನಮೂದಾಗಿದೆ.
ಜಾಗತಿ ಆರ್ಥಿಕ ಮತ್ತು ಹಣಕಾಸು ಸಮಸ್ಯೆಯ ಕಾರಣ ಇಂಧನ ಬೇಡಿಕೆ ಹೆಚ್ಚಿದ ಕಾರಣ ಕಳೆದ ವರ್ಷದ ಜುಲೈ ತಿಂಗಳಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 147 ಡಾಲರುಗಳನ್ನು ತಲುಪಿತ್ತು. ಈ ಐತಿಹಾಸಿಕ ಬೆಲೆಯು ಪ್ರಸಕ್ತ ಶೇಕಡಾ 56ರಷ್ಟು ಕುಸಿತ ಕಂಡಿದೆ.
|