ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೀರಾ ಸಪ್ಪೆ ಬಜೆಟ್ - ಬಿಜೆಪಿ; ಅದ್ಭುತ - ಕಾಂಗ್ರೆಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೀರಾ ಸಪ್ಪೆ ಬಜೆಟ್ - ಬಿಜೆಪಿ; ಅದ್ಭುತ - ಕಾಂಗ್ರೆಸ್
ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಸೋಮವಾರ ಸಂಸತ್ತಿನಲ್ಲಿ ಮಂಡಿಸಿರುವ ಬಜೆಟ್ ಪುಕ್ಕಲುತನದಿಂದ ಕೂಡಿದ್ದಾಗಿದ್ದು, ತೀರಾ ಸಪ್ಪೆಯಾಗಿದೆ; ಅಲ್ಲದೆ ಪರಿಣಾಮಕಾರಿ ಅಂಶಗಳನ್ನು ಹೊಂದಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸಿದ್ದರೆ, ಅತ್ತ ಕಾಂಗ್ರೆಸ್ 'ಅದ್ಭುತ' ಎಂದು ಬಣ್ಣಿಸಿದೆ.

"ಈ ಬಜೆಟ್‌ನಲ್ಲಿ ಉಪಯೋಗಕ್ಕೆ ಬರುವಂತಹುದು ಏನಾದರೂ ಇದೆಯೆಂದು ನನಗನ್ನಿಸುತ್ತಿಲ್ಲ. ಇದು ತೀರಾ ಹೇಡಿತನದ್ದು, ನೀರಸವಾದದ್ದು ಮತ್ತು ಪರಿಣಾಮಕಾರಿ ಅಂಶಗಳಿಂದ ಹೊರತಾಗಿದೆ" ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

ಅದೇ ಹೊತ್ತಿಗೆ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಮಾತನಾಡುತ್ತಾ, "ನಿಕಟ ಉತ್ತೇಜನ, ಮಧ್ಯಮ ದೂರದೃಷ್ಟಿ ಮತ್ತು ದೀರ್ಘಾವಧಿಯ ಸ್ವರೂಪ ಪರಿಷ್ಕರಣೆಗಾಗಿನ ವಿವೇಚನೆಯನ್ನು ಹೊಂದಿದ ಬಜೆಟ್" ಎಂದಿದ್ದಾರೆ.

"ಜಾಗತಿಕ ಹಿಂಜರಿತ ಸಮಯದಲ್ಲಿ ವಿತ್ತ ಸಚಿವರು ಅದ್ಭುತ ನಿರ್ವಹಣೆ ಮಾಡಿದ್ದು, ಜನತೆಯ ಮೇಲೆ ಯಾವುದೇ ರೀತಿಯ ತೆರಿಗೆಗಳನ್ನು ವಿಧಿಸಿಲ್ಲ" ಎಂದು ಬಜೆಟ್ ನಂತರ ಸಂಸತ್ತಿನ ಹೊರಗೆ ಪತ್ರಕರ್ತರ ಜತೆ ಮಾತನಾಡುತ್ತಾ ತಿಳಿಸಿದರು.

ಮಾರುಕಟ್ಟೆ ಯಾಕೆ ಋಣಾತ್ಮಕ ಪ್ರತಿಕ್ರಿಯೆ ನೀಡುತ್ತಿದೆ ಎಂಬ ಪ್ರಶ್ನೆಗೆ ತಿವಾರಿ, ವಿತ್ತ ಸಚಿವರು ಬಜೆಟ್ ತಯಾರಿಸುವಾಗ ಕೇವಲ ಮಾರುಕಟ್ಟೆಯನ್ನು ಮಾತ್ರ ಗಮನಕ್ಕೆ ತೆಗೆದುಕೊಂಡಿದ್ದಲ್ಲ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ಯಮ ವಲಯ ನಿರಾಸೆ; ಆಮ್ ಆದ್ಮಿಗೆ ಖುಷಿ
ಶೈಕ್ಷಣಿಕ ಸಾಲಕ್ಕೆ ಸಬ್ಸಿಡಿ, ಮಹಿಳಾ ಕಲ್ಯಾಣ, ಉದ್ಯೋಗ ಖಾತ್ರಿ
ಕೃಷಿ, ವಸತಿ, ಗ್ರಾಮೀಣ ಪ್ರದೇಶಕ್ಕೆ ಬಂಪರ್ ಕೊಡುಗೆ
ಚಿನ್ನ ತುಟ್ಟಿ, ಸೆಲ್ ಫೋನ್, ಎಲ್‍ಸಿಡಿ ಟಿವಿ ಅಗ್ಗ
ಒಂದುವರೆ ವರ್ಷದೊಳಗೆ ಗುರುತಿನ ಚೀಟಿ
ತೆರಿಗೆ ಮಿತಿ ಏರಿಕೆ, ರಾಜಕೀಯ ದೇಣಿಗೆ ತೆರಿಗೆಮುಕ್ತ