ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಪ್ರಾಧಿಕಾರದ 15 ವಿಮಾನ ನಿಲ್ದಾಣಗಳು ಲಾಭದಲ್ಲಿವೆ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಪ್ರಾಧಿಕಾರದ 15 ವಿಮಾನ ನಿಲ್ದಾಣಗಳು ಲಾಭದಲ್ಲಿವೆ'
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಆಡಳಿತದಲ್ಲಿರುವ 125 ವಿಮಾನ ನಿಲ್ದಾಣಗಳಲ್ಲಿ 86 ಸಮರ್ಥವಾಗಿದ್ದು, 2007-08ರ ಸಾಲಿನಲ್ಲಿ 15 ನಿಲ್ದಾಣಗಳು ಲಾಭ ತಂದಿವೆ ಎಂದು ರಾಜ್ಯ ಸಭೆಗೆ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಡಿಯಲ್ಲಿರುವ 125 ನಿಲ್ದಾಣಗಳಲ್ಲಿ ನಾಗರಿಕ ವಲಯಗಳ ರಕ್ಷಣಾ ನಿಲ್ದಾಣಗಳನ್ನೂ ಒಳಗೊಂಡಿವೆ.

"ನಾಗರಿಕ ವಲಯದ ನಿಲ್ದಾಣಗಳೂ ಸೇರಿ 125 ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ನಡೆಸುತ್ತಿದೆ. ಅವುಗಳಲ್ಲಿ ಕಳೆದ ಮೂರು ವರ್ಷಗಳಿಂದ 2005-06ನೇ ಸಾಲಿನಲ್ಲಿ 13, 2006-07ರ ಸಾಲಿನಲ್ಲಿ 14 ಹಾಗೂ 2007-08ರ ಸಾಲಿನಲ್ಲಿ 15 ನಿಲ್ದಾಣಗಳು ಲಾಭ ತಂದಿವೆ" ಎಂದು ರಾಜ್ಯ ಸಭೆಗೆ ನೀಡಿರುವ ಲಿಖಿತ ಪ್ರತಿಕ್ರಿಯೆಯಲ್ಲಿ ಸಚಿವರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಹೆಚ್ಚಿನ ಆದಾಯಕ್ಕಾಗಿ ಪ್ರಾಧಿಕಾರವು ದೊಡ್ಡ ವಿಮಾನಗಳನ್ನು ಇಳಿಸುವ ವ್ಯವಸ್ಥೆಗಳನ್ನು ಮಾಡುವ ಮೂಲಕ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ನಿರ್ಧಾರಕ್ಕೂ ಬಂದಿದೆ.

"ಬೃಹತ್ ಗಾತ್ರದ ವಿಮಾನಗಳಿಗೆ ತಂಗಲು ಅವಕಾಶ ಮಾಡಿಕೊಡುವ ಸಲುವಾಗಿ ನಿಲ್ದಾಣವನ್ನು ಉನ್ನತ ದರ್ಜೆಗೇರಿಸಲಾಗುತ್ತದೆ. ವಿಮಾನಯಾನ ಸಂಸ್ಥೆಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಇಲ್ಲಿ ಅಗತ್ಯ ಹೆಚ್ಚುವರಿ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ಇದರಿಂದಾಗಿ ಪ್ರಾಧಿಕಾರಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆಯಿದೆ" ಎಂದು ಪಟೇಲ್ ವಿವರಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೇತಾಸ್ ಒಪ್ಪಂದಕ್ಕೆ ಆಂಧ್ರ ಸರಕಾರ ಎಳ್ಳುನೀರು
ಎಕ್ಸ್‌ಪ್ಲೋರರ್ ಮೂಲಕ ಹ್ಯಾಕ್ ಮಾಡಬಹುದು: ಮೈಕ್ರೋಸಾಫ್ಟ್
ಇದು ತಮಾಷೆಯಲ್ಲ; ಮೂತ್ರದಿಂದ ಕಾರು ಓಡುತ್ತೆ..!
ಈ ವರ್ಷ ಇನ್ನಷ್ಟು ಉತ್ತೇಜನ ಅನಗತ್ಯ: ಮಾಂಟೆಕ್
ಬರಲಿದೆ 'ಸರಳ್'ನ ಸರಳೀಕೃತ ಅವತಾರ
ರಫ್ತು ಕ್ಷೇತ್ರದ ಸಬ್ಸಿಡಿ ವಿಸ್ತರಣೆ